ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ವೆಸ್ಟ್ ಇಂಡೀಸ್, 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ.
ಸೆಂಟ್ ಲೂಸಿಯಾದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶ ಕೇವಲ 186 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಂದ್ಯದ ಗೆಲುವಿಗೆ 13 ರನ್ಗಳ ಗುರಿ ಪಡೆದ ವೆಸ್ಟ್ ಇಂಡೀಸ್, ಯಾವುದೇ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡುವ ಮೂಲಕ 10 ವಿಕೆಟ್ಗಳ ಜಯಭೇರಿ ಬಾರಿಸಿತು. ಆ ಮೂಲಕ ವೆಸ್ಟ್ ಇಂಡೀಸ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಗೆದ್ದುಬೀಗಿತು.
ನಾಲ್ಕನೇ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್, ಆರಂಭದಿಂದಲೇ ವಿಂಡೀಸ್ ಬೌಲಿಂಗ್ ದಾಳಿಗೆ ತತ್ತರಿಸಿತು. ನುರುಲ್ ಹಸನ್(60*) ಅರ್ಧಶತಕದ ನಡುವೆಯೂ 186 ರನ್ಗಳಿಗೆ ಆಲೌಟ್ ಆದ ಬಾಂಗ್ಲಾ ಪಡೆ, ಕೇವಲ 13 ರನ್ಗಳ ಮುನ್ನಡೆ ಸಾಧಿಸಿತು. ವೆಸ್ಟ್ ಇಂಡೀಸ್ ಪರ ಕೀಮರ್ ರೋಚ್, ಅಲ್ಜಾರಿ ಜೋಸೆಫ್ ಹಾಗೂ ಜೈಡನ್ ಸೇಲ್ಸ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಬಾಂಗ್ಲಾದೇಶ ನೀಡಿದ 13 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ವೆಸ್ಟ್ ಇಂಡೀಸ್, 2.5 ಓವರ್ಗಳಲ್ಲಿ ಗುರಿ ತಲುಪುವ ಮೂಲಕ ಭರ್ಜರಿ 10 ವಿಕೆಟ್ಗಳ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್ ಪರ ಅದ್ಬುತ ಪ್ರದರ್ಶನ ನೀಡಿದ ಕೈಲ್ ಮೈಯರ್ಸ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ: 234 ಮತ್ತು 186
ವೆಸ್ಟ್ ಇಂಡೀಸ್: 408 ಮತ್ತು 13/0
====================