Wimbledon 2022 -ಎರಡನೇ ಸುತ್ತು ಪ್ರವೇಶಿಸಿದ ನೊವಾಕ್ ಜಾಕೊವಿಕ್

ಅಗ್ರ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು 2022ರ ವಿಂಬಲ್ಡನ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ನೊವಾಕ್ ಜಾಕೊವಿಕ್ ಅವರು 6-4, 3-6, 6-3, 6-4ರಿಂದ ಕೊರಿಯಾದ ಕೆವೊನ್ ಸೂನ್ ವೂ ಅವರನ್ನು ಸೋಲಿಸಿದ್ರು.
ಹಾಲಿ ಚಾಂಪಿಯನ್ ಆಗಿರುವ ನೊವಾಕ್ ಜಾಕೊವಿಕ್ ಅವರು ಸತತ ನಾಲ್ಕು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಲ್ಲದೆ ಇಲ್ಲಿಯವರೆಗೆ ಒಟ್ಟು ಏಳು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈಗಾಗಲೇ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿರುವ ನೊವಾಕ್ ಜಾಕೊವಿಕ್ ಅವರು 21ನೇ ಪ್ರಶಸ್ತಿಯತ್ತ ಚಿತ್ತವನ್ನಿಟ್ಟಿದ್ದಾರೆ. Wimbledon 2022- Novak Djokovic, Jabeur, Norrie cruise in Round 2
ಇನ್ನು ಮೂರನೇ ಶ್ರೇಯಾಂಕಿತ ನಾರ್ವೆಯ ಕಾಸ್ಪೆರ್ ರೂಡ್ ಅವರು 7-6, 7-6, 6-2ರಿಂದ ಸ್ಪೇನ್ ನ ಆಲ್ಬೆರ್ಟ್ ರಾಮೊಸ್ ವಿನೊಲಾಸ್ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಹಾಗೇ ಪುರುಷರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್ ನ ಆಲೆಜಾಂಡ್ರೋ ಡೆವಿಡೊವಿಚ್ ಅವರು 7-6, 6-4, 5-7, 2-6, 7-6ರಿಂದ ಹ್ಯೂಬರ್ಟ್ ಹಾರ್ಕಾಝ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು.
ಇನ್ನು 9ನೇ ಶ್ರೇಯಾಂಕಿತ ಬ್ರಿಟನ್ ನ ಕಾಮೆರನ್ ನೊರಿಯ್ 6-0, 7-6, 6-3 ರಿಂದ ಸ್ಪೇನ್ ಪಾಬ್ಲೊ ಆಂಡುಜಾರ್ ಅವರನ್ನು ಮಣಿಸಿದ್ರು.