Sachin Tendulkar- ಮಗನ ಆಟವನ್ನು ಇಲ್ಲಿಯವರೆಗೆ ನೋಡದ ಸಚಿನ್ ತೆಂಡುಲ್ಕರ್…! ಯಾಕಂದ್ರೆ..!

ಸಚಿನ್ ತೆಂಡುಲ್ಕರ್.. ವಿಶ್ವ ಕ್ರಿಕೆಟ್ ನ ಅಪ್ರತಿಮ ಆಟಗಾರ. ಸಚಿನ್ ತನ್ನ 23 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಮಾಡಿರುವಂತಹ ಸಾಧನೆ, ಯಶಸ್ಸು ಎಂದಿಗೂ ಎಂದೆಂದಿಗೂ ಕ್ರಿಕೆಟ್ ಜಗತ್ತು ಮರೆಯುವುದಿಲ್ಲ.
ಆದ್ರೆ ಯಾಕೋ ಏನೋ ಗೊತ್ತಿಲ್ಲ. ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ ತಂದೆಯ ಹಾದಿಯಲ್ಲಿ ಮುನ್ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ತಂದೆಯ ಹಾಗೇ ಅತ್ಯುನ್ನತ ಮಟ್ಟದಲ್ಲಿ ಬೆಳೆಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
22ರ ಹರೆಯದ ಅರ್ಜುನ್ ತೆಂಡುಲ್ಕರ್, ಅಪ್ಪ ಸಚಿನ್ ತೆಂಡುಲ್ಕರ್ ಏರಿರುವ ಎತ್ತರಕ್ಕೆ ಬೆಳೆಯುವುದು ಅಸಾಧ್ಯ. ಆ ಕನಸು ಕೂಡ ಗಗನ ಕುಸುಮ ಎಂಬುದರಲ್ಲಿ ಎರಡು ಮಾತಿಲ್ಲ.
ಆದ್ರೆ ಅರ್ಜುನ್ ತೆಂಡುಲ್ಕರ್ ವಿವಿಧ ವಯೋಮಿತಿ ಟೂರ್ನಿಗಳಲ್ಲಿ ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ್ದಾರೆ. ಹಾಗೇ ಮುಂಬೈ ರಣಜಿ ತಂಡಕ್ಕೆ ಎಂಟ್ರಿಯಾಗಿದ್ದಾರೆ. ಆಲ್ ರೌಂಡರ್ ಆಗಿರುವ ಅರ್ಜುನ್ ತೆಂಡುಲ್ಕರ್ ಕಳೆದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಆದ್ರೆ ಆಡು ವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಈ ವರ್ಷ ಕೂಡ 30 ಲಕ್ಷ ರೂಪಾಯಿಗೆ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ.

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಅರ್ಜುನ್ ತೆಂಡುಲ್ಕರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕಷ್ಟ. ಮಗ ಅರ್ಜುನ್ ತೆಂಡುಲ್ಕರ್ ನನ್ನು ತನ್ನಂತೆ ಕ್ರಿಕೆಟ್ ಆಟಗಾರನನ್ನಾಗಿ ಮಾಡಬೇಕು ಎಂಬುದು ಸಚಿನ್ ತೆಂಡುಲ್ಕರ್ ಅವರ ಆಸೆ. ಇದಕ್ಕಾಗಿ ಸಚಿನ್ ಸಾಕಷ್ಟು ಪ್ರಯತ್ನ ಕೂಡ ಮಾಡಿದ್ದಾರೆ. ಆದ್ರೆ ಅರ್ಜುನ್ ಗೆ ಅಂತಹ ಅದೃಷ್ಟವಿಲ್ಲ. ಕ್ರಿಕೆಟ್ ಆಟ ರಕ್ತಗತವಾಗಿ ಬಂದ್ರೂ ಅರ್ಜುನ್ ತೆಂಡುಲ್ಕರ್ಗೆ ಅದೃಷ್ಟ ಕೂಡಿ ಬಂದಿಲ್ಲ.
ಇದೀಗ ಮಗನ ಬಗ್ಗೆ ಮಾತನಾಡಿರುವ ಸಚಿನ್ ತೆಂಡುಲ್ಕರ್, ತನ್ನ ಮಗ ಆಡುವುದನ್ನು ನಾನು ಇಲ್ಲಿಯವರೆಗೆ ನೋಡಿಲ್ಲ. ಅವನು ಆಡುತ್ತಿರುವುದನ್ನು ನಾನು ನೋಡುತ್ತಾ ಇದ್ರೆ ಅವನು ಒತ್ತಡಕ್ಕೆ ಗುರಿಯಾಗುತ್ತಾನೆ. ಸ್ವಚ್ಛಂದವಾಗಿ ಆಡಲು ಆಗುತ್ತಿಲ್ಲ. ಹೀಗಾಗಿ ಅವನು ಆಡುವುದನ್ನು ಇಲ್ಲಿಯವರೆಗೆ ನೋಡಿಲ್ಲ. ಮುಂದೆನೂ ನೋಡುವುದಿಲ್ಲ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. why sachin tenudlkar never watches his son Arjun Tendulkar play
ಹಾಗಂತ ಸಚಿನ್ ತೆಂಡುಲ್ಕರ್ ಅವರು, ಅರ್ಜುನ್ ತೆಂಡುಲ್ಕರ್ ಆಡುವುದನ್ನು ನೋಡೇ ಇಲ್ಲ ಅಂತಲ್ಲ. ಪಂದ್ಯ ನಡೆಯುತ್ತಿರುವಾಗ ಯಾರಿಗೂ ತಿಳಿಯದಂತೆ ಅರ್ಜುನ್ ಆಡುವುದನ್ನು ನೋಡಿದ್ದೂ ಉಂಟಂತೆ ಎಂದು ಸಚಿನ್ ತೆಂಡುಲ್ಕರ್ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಗ ನನ್ನಂತೆ ಕ್ರಿಕೆಟ್ ಆಟಗಾರನಾಗಬೇಕು ಎಂಬ ಆಸೆಪಟ್ಟಿರುವುದು ತಪ್ಪಲ್ಲ. ಹಾಗಂತ ಮಗನ ಮೇಲೆ ಒತ್ತಡ ಹಾಕುತ್ತಿಲ್ಲ. ಆದ್ರೂ ಸ್ವಲ್ಪ ಮಟ್ಟಿನ ಪ್ರಭಾವ ಅಂತೂ ಇದೆ. ಏನೇ ಆಗ್ಲಿ, ಅರ್ಜುನ್ ತೆಂಡುಲ್ಕರ್ ಗೆ ಸಚಿನ್ ತೆಂಡುಲ್ಕರ್ ಹೆಸರು, ಖ್ಯಾತಿ ಅವರನ್ನು ಒತ್ತಡಕ್ಕೆ ಬೀಳುವಂತೆ ಮಾಡುತ್ತಿದೆ.