ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಗೆಲುವೊಂದೇ ದಾರಿ. ಪ್ಲೇ ಆಫ್ ಕನಸು-ನನಸು ಆಗಬೇಕು ಅಂದರೆ ಸಾಧಿಸಬೇಕು. ಅದಾದಮೇಲೆ ಡೆಲ್ಲಿ ಕ್ಯಾಪಿಟಲ್ ಸೋಲಿಗೆ ಪ್ರಾರ್ಥನೆ ಮಾಡಬೇಕು. ಹೀಗಾಗಿ ಈ ಪಂದ್ಯವನ್ನು ಗೆದ್ದರು ಕೂಡ ಆರ್ ಸಿಬಿ ಪ್ಲೇ ಆಫ್ ಕನಸು ಲೆಕ್ಕಾಚಾರದಲ್ಲಿ ಮಾತ್ರ ಉಳಿಯುತ್ತದೆ.
ಗುಜರಾತ್ ಟೈಟನ್ಸ್ ವಿರುದ್ಧ ಪಂದ್ಯ ಗೆದ್ದ ಮೇಲೆ ಆರ್ಸಿಬಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಡುತ್ತಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯ ಗೆದ್ದರೆ ಅದು ನಾಲ್ಕನೇ ಸ್ಥಾನಕ್ಕೆ ಇರುತ್ತದೆ ಯಾಕಂದ್ರೆ ಡೆಲ್ಲಿ ಕ್ಯಾಪಿಟಲ್ಸ್ ರನ್ ರೇಟ್ ಆರ್ಸಿಬಿ ಗಿಂತ ಹೆಚ್ಚಿದೆ.ಹೀಗಾಗಿ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಲೇಬೇಕು. ಮತ್ತೊಂದು ಕಡೆಯಲ್ಲಿ ರಾಜಸ್ಥಾನ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಕೂಡ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಎರಡನೇ ಸ್ಥಾನಕ್ಕೆ ಏರುತ್ತದೆ. ಡೆಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ಕನಸು ನುಚ್ಚುನೂರಾಗುತ್ತದೆ.
ಗುಜರಾತ್ ಟೈಟಾನ್ಸ್ ಮತ್ತು ಲಖನೌ ಸೂಪರ್ ಜೆಂಟ್ಸ್ ಈಗಾಗಲೇ ಪ್ಲೇಆಫ್ ತಲುಪಿದೆ. ರಾಜಸ್ತಾನ್ ರಾಯಲ್ಸ್ ಮೂರನೇ ಸ್ಥಾನದಲ್ಲಿ ಗಟ್ಟಿಯಾಗಿದೆ. ನಾಲ್ಕನೇ ಸ್ಥಾನಕ್ಕೆ ಈಗ ದೊಡ್ಡ ಫೈಟ್ ನಡೀತಾ ಇದೆ. ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಯಾರಿಗೆ ಬೇಕಾದರೂ ಲಕ್ ಕುದುರಬಹುದು. ಇವರ ಜೊತೆ ಪಂಜಾಬ್ ಕಿಂಗ್ಸ್ ಕೂಡ ಅದೃಷ್ಟ ಪರೀಕ್ಷೆ ಇಳಿ ಯಬಹುದು. ಪಂಜಾಬ್ ಕೊನೆಯ ಪಂದ್ಯವನ್ನು ಭರ್ಜರಿಯಾಗಿ ಗೆದ್ದರೆ ಕೂಡ ನೆಟ್ ರನ್ ರೇಟ್ ಆಧಾರದಲ್ಲಿ ಮಾತ್ರ ಪ್ಲೇ ಆಫ್ ಪ್ರವೇಶಿಸಬಹುದು. ಒಟ್ಟಿನಲ್ಲಿ ಐಪಿಎಲ್ ನ ಕೊನೆಯ ಲೀಗ್ ಪಂದ್ಯಗಳುಸಿಕ್ಕಾಪಟ್ಟೆ ಕುತೂಹಲ ಕೆರಳಿಸಿವೆ.