WIPL2023- ಶುರುವಾಗಲಿದೆ ಮಹಿಳಾ ಐಪಿಎಲ್ ಟೂರ್ನಿ-ಸೌರವ್ ಗಂಗೂಲಿ
![WIPL 2023- ಶುರುವಾಗಲಿದೆ ಮಹಿಳಾ ಐಪಿಎಲ್ ಟೂರ್ನಿ- ಸೌರವ್ ಗಂಗೂಲಿ 3 Sourav Ganguly BCCI president sports karnataka](http://sportskarnataka.com/wp-content/uploads/2022/02/sourav-ganguly-300x166.jpg)
ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಟೂರ್ನಿ ಖಂಡಿತವಾಗಿಯೂ ನಡೆಯಲಿದೆ. ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಮಹಿಳಾ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ, 2023ರಲ್ಲಿ ಮಹಿಳಾ ಐಪಿಎಲ್ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ. ಪುರುಷರ ಐಪಿಎಲ್ ಟೂರ್ನಿಯಂತೆ ಮಹಿಳಾ ಐಪಿಎಲ್ ಕೂಡ ದೊಡ್ಡ ಮಟ್ಟದ ಯಶಸ್ಸು ಸಾಧಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ರು.
We are at the level of formulation to have a full-fledged WIPL2023 – sourav ganguly
ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯು ಈಗಾಗಲೇ ಆರು ಮಹಿಳಾ ತಂಡಗಳ ಟೂರ್ನಿ ನಡೆಸುತ್ತಿದೆ. ಆದ್ರೆ ಬಿಸಿಸಿಐ ಇನ್ನೂ ಕುಡ ಟಿ-20 ಚಾಲೆಂಜ್ ಅಂತ ಮಹಿಳಾ ಟಿ-20 ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ. ಆದ್ರೆ ಬಿಸಿಸಿಐಗೆ ಪೂರ್ಣ ಪ್ರಮಾಣದಲ್ಲಿ ಮಹಿಳಾ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರಿಸಿದ್ದರು.
ಇನ್ನು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ ಮಾತನಾಡಿದ್ದ ಗಂಗೂಲಿ, ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜನೆ ಮಾಡುವುದು ಬಿಸಿಸಿಐ ಉದ್ದೇಶ. ಸದ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯದಲ್ಲೇ ತಾಣಗಳ ಮತ್ತು ವೇಳಾಪಟ್ಟಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ರು.
ಇನ್ನೊಂದೆಡೆ ಸೌರವ್ ಗಂಗೂಲಿ ಇತ್ತೀಚೆಗೆ ಕೇಳಿಬರುತ್ತಿರುವ ಟೀಕೆಗಳಿಗೂ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಬಿಸಿಸಿಐ ಅಧ್ಯಕ್ಷನಾಗಿ ಯಾವ ರೀತಿ ಕೆಲಸ ಮಾಡಬೇಕೋ ಅದೇ ರೀತಿ ಮಾಡುತ್ತಿದ್ದೇನೆ. ಯಾವುದೇ ಟೀಕೆ, ಆರೋಪಗಳಿಗೆ ಉತ್ತರ ನೀಡಲೇಬೇಕಾದ ಅನಿವಾರ್ಯತೆ ನನಗಿಲ್ಲ ಎಂದು ಹೇಳಿದ್ರು.