ವಿಶ್ವ ಕ್ರಿಕೆಟ್‌ನ ʼರನ್ ಮಷಿನ್ʼ ಎನಿಸಿರುವ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತ್ಯಧಿಕ ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಆರ್‌ಸಿಬಿ ತಂಡದ ಬ್ಯಾಟಿಂಗ್ ಅಸ್ತ್ರವಾಗಿರುವ ಕೊಹ್ಲಿ, ತಮ್ಮ ಹೆಸರಿಗೆ ಹೊಸ ದಾಖಲೆಯೊಂದನ್ನ ಸೇರಿಸಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಈವರೆಗೂ 6499 ರನ್‌ಗಳಿಸಿರುವ ಕೊಹ್ಲಿ, ಅತ್ಯಧಿಕ ರನ್‌ಗಳಿಸಿರುವ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಬಾಲ್‌ಗಳನ್ನು ಆಡಿರುವ ದಾಖಲೆ ಸಹ ವಿರಾಟ್ ಕೊಹ್ಲಿ ಹೆಗಲಿಗೇರಿದೆ. ಐಪಿಎಲ್‌ನಲ್ಲಿ ಈವರೆಗೂ 218 ಪಂದ್ಯಗಳನ್ನು ಆಡಿರುವ ವಿರಾಟ್, ಒಟ್ಟು 5028 ಬಾಲ್‌ಗಳನ್ನು ಎದುರಿಸಿದ್ದಾರೆ. ಆ ಮೂಲಕ ಐಪಿಎಲ್‌ನಲ್ಲಿ ಹೆಚ್ಚು ಬಾಲ್‌ಗಳನ್ನು ಎದುರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ.

2022ರ ಐಪಿಎಲ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದರು. ಪುಣೆಯಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, 33 ಬಾಲ್‌ಗಳಲ್ಲಿ 30 ರನ್‌ಗಳಿಸಿದ್ದರು. 15ನೇ ಆವೃತ್ತಿಯ ಐಪಿಎಲ್‌ನಲ್ಲಿ 11 ಪಂದ್ಯಗಳನ್ನು ಆಡಿರುವ ಕೊಹ್ಲಿ, 21.6ರ ಸರಾಸರಿಯಲ್ಲಿ 216 ರನ್‌ಗಳಿಸಿದ್ದು, 1 ಅರ್ಧಶತಕ ಸಿಡಿಸಿದ್ದಾರೆ.
IPL ಹೆಚ್ಚು ಬಾಲ್ ಎದುರಿಸಿದವರು:
ವಿರಾಟ್ ಕೊಹ್ಲಿ – 5028
ಶಿಖರ್ ಧವನ್ – 4863
ರೋಹಿತ್ ಶರ್ಮ – 4429
ಡೇವಿಡ್ ಮಿಲ್ಲರ್ – 4062
ಸುರೇಶ್ ರೈನಾ – 4043