Virat Kohli – ವಿರಾಟ್ ಕೊಹ್ಲಿಯೇ ಆರ್ ಸಿಬಿಯ ನಾಯಕ ಏಕೆ ಆಗಬಾರದು..?
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ರನ್ ಮೆಷಿನ್.. ಟೀಮ್ ಇಂಡಿಯಾದ ಎವರ್ ಗ್ರೀನ್ ಹೀರೋ.. ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಬ್ರ್ಯಾಂಡ್ ಅಂಬಾಸಿಡರ್. ಹೀಗೆ ಕ್ರಿಕೆಟ್ ಜಗತ್ತಿನಲ್ಲಿ ಸದಾ ಸಂಚಲವನ್ನು ಸೃಷ್ಟಿಸುತ್ತಿರುವ ವಿರಾಟ್ ಕೊಹ್ಲಿ ಈಗ ಒತ್ತಡದಲ್ಲಿ ಸಿಲುಕಿಕೊಂಡಿದ್ದಾರೆ.
ಕಳೆದ ವರ್ಷ ಆರ್ ಸಿಬಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ನಂತರ ಟೀಮ್ ಇಂಡಿಯಾದ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಇದೀಗ ವಿರಾಟ್ ಮೇಲೆ ನಾಯಕತ್ವದ ಹೊರೆ ಇಲ್ಲ. ಟೀಮ್ ಇಂಡಿಯಾದಲ್ಲಿ ಮತ್ತು ಐಪಿಎಲ್ ನಲ್ಲಿ ಸಾಮಾನ್ಯ ಆಟಗಾರನಂತೆ ಆಡಲಿದ್ದಾರೆ. ಹೀಗಾಗಿ ವಿರಾಟ್ ಬ್ಯಾಟ್ ನಿಂದ ರನ್ ಗಳು ನೀರಿನಂತೆ ಹರಿದು ಬರುತ್ತೆ ಎಂಬ ನಂಬಿಕೆ ಇದೆ.
ಇದೀಗ 15ನೇ ಆವೃತ್ತಿಯ ಐಪಿಎಲ್ ಗಾಗಿ ಫ್ರಾಂಚೈಸಿಗಳು ಭಾರೀ ಸಿದ್ದತೆ ಮಾಡಿಕೊಂಡಿವೆ. ಈಗಾಗಲೇ ಬಹುತೇಕ ತಂಡಗಳು ತಂಡದ ನಾಯಕ ಯಾರು ಎಂಬುದನ್ನು ಬಹಿರಂಗಪಡಿಸಿವೆ. ಆದ್ರೆ ಐಪಿಎಲ್ ಅಭಿಮಾನಿಗಳ ನೆಚ್ಚಿನ ತಂಡವಾಗಿರುವ ಆರ್ ಸಿಬಿಯ ನಾಯಕ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಗಿದೆ. ಗ್ಲೆನ್ ಮ್ಯಾಕ್ಸ್ ವೆಲ್ ನಂತಹ ಸ್ಡಾರ್ ಆಟಗಾರನಿದ್ರೂ ಆರ್ ಸಿಬಿ ಮನಸ್ಸು ಮಾಡುತ್ತಿಲ್ಲ. ಇನ್ನು ಹರಾಜಿನಲ್ಲಿ ಯಾವ ಆಟಗಾರ ಸಿಗ್ತಾನೋ ಗೊತ್ತಿಲ್ಲ. ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ ಅವರನ್ನು ಹರಾಜಿನಲ್ಲಿ ಖರೀದಿ ಮಾಡಿದ್ರೂ ನಾಯಕತ್ವ ನೀಡುತ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಯಾಕಂದ್ರೆ ವಿರಾಟ್, ಮ್ಯಾಕ್ಸ್ ವೆಲ್ ನಂತಹ ಆಟಗಾರರಿಗೆ ಹೊಂದಾಣಿಕೆಯಾಗುವಂತಹ ಆಟಗಾರರನ್ನು ನಾಯಕನಾಗಿ ಆಯ್ಕೆ ಮಾಡಬೇಕು. ಈ ಲೆಕ್ಕಚಾರವನ್ನು ನೋಡಿದ್ರೆ ಮನೀಷ್ ಪಾಂಡೆ ಅಥವಾ ಡೇವಿಡ್ ವಾರ್ನರ್ ಅಥವಾ ಸ್ಟೀವನ್ ಸ್ಮಿತ್, ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಬೇಕು,
Virat Kohli agrees to the captaincy role, he will be captain for the RCB
ಒಂದು ವೇಳೆ ಈ ಆಟಗಾರರು ಖರೀದಿಯಲ್ಲಿ ಸಿಗದಿದ್ರೆ ವಿರಾಟ್ ಕೊಹ್ಲಿಯೇ ಆರ್ ಸಿಬಿಯ ಮುಂದಿನ ನಾಯಕನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ಬಗ್ಗೆ ಆರ್ ಸಿಬಿಯ ಚೇರ್ ಮೆನ್ ಕೂಡ ಸಣ್ಣ ಸುಳಿನ್ನು ನೀಡಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಇದಕ್ಕೆ ಒಪ್ಪಿಗೆ ಕೊಡ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಈಗಾಗಲೇ ಕಪ್ ಗೆದ್ದಿಲ್ಲ ಅನ್ನೋ ಹಣೆಪಟ್ಟಿ ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಡೆಗೆ ಗಮನ ಹರಿಸುವತ್ತ ಚಿತ್ತವನ್ನಿಟಿದ್ದಾರೆ. ಒಂದು ವೇಳೆ ಆರ್ ಸಿಬಿಗೆ ಅನಿವಾರ್ಯವಾದ್ರೆ ವಿರಾಟ್ ಮತ್ತೆ ಆರ್ ಸಿಬಿಯ ಚುಕ್ಕಾಣಿ ಹಿಡಿಯಬಹುದು.
ಒಟ್ಟಿನಲ್ಲಿ ಆರ್ ಸಿಬಿ ಅಭಿಮಾನಿಗಳು ಕೂಡ ವಿರಾಟ್ ಕೊಹ್ಲಿಯೇ ಆರ್ ಸಿಬಿಗೆ ಮತ್ತೆ ನಾಯಕನಾಗಬೇಕು ಎಂಬ ಒಕ್ಕೋರಳ ಧ್ವನಿಯೂ ಕೇಳಿಬರುತ್ತಿದೆ.