ಯು.ಎಸ್. ಓಪನ್ನಲ್ಲಿ (US Open) ಈ ಬಾರಿ ದಾಖಲೆಗಳು ನಿರ್ಮಾಣವಾಗಲಿವೆ. ಫೈನಲ್ನಲ್ಲಿ (Final) ಯಾರು ಗೆದ್ದರೂ ಇತಿಹಾಸ ಗ್ಯಾರೆಂಟಿ. ಸೋಮವಾರ ಆರ್ಥರ್ ಆಶ್ (Arthur Ash Stadium)ಕ್ರೀಡಾಂಗಣದಲ್ಲಿ ಹೊಸ ಚಾಂಪಿಯನ್ಗಳ ಉದಯವಾಗಲಿದೆ. ನಾರ್ವೆಯ ಕ್ಯಾಸ್ಪರ್ ರುಡ್ (Casper Rudd) ಮತ್ತು ಸ್ಪೇನ್ನ ಕಾರ್ಲೋಸ್ ಅಲ್ಕಾರೆಜ್ (Carlos Alcaraz) ನಡುವೆ ಚೊಚ್ಚಲ ಗ್ರಾಂಡ್ಸ್ಲಾಂಗಾಗಿ ಜಿದ್ದಾಜಿದ್ದಿ ನಡೆಯಲಿದೆ.
ಟೆನಿಸ್ ಅಂಗಳದ ಯುವ ತಾರೆಗಳಿಬ್ಬರು ಈ ಬಾರಿ ಯುಎಸ್ ಓಪನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯ ಫೈನಲ್ಗೇರಿದ್ದು, ಸೋಮವಾರ ಹೊಸ ಚಾಂಪಿಯನ್ ಒಬ್ಬರ ಉದಯವಾಗಲಿದೆ. ಪುರುಷರ ಸಿಂಗಲ್ಸ್ನಲ್ಲಿ 19 ವರ್ಷದ ಸ್ಪೇನ್ನ (Spain) ಕಾರ್ಲೊಸ್ ಆಲ್ಕರಜ್ ಹಾಗೂ ನಾರ್ವೆಯ (Norvey) ಕ್ಯಾಸ್ಪರ್ ರುಡ್ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.
ರಾಫೆಲ್ ನಡಾಲ್ (Rafael Nadal) ಬಳಿಕ ಸ್ಪೇನ್ನಲ್ಲಿ ಕಾಣಿಸಿಕೊಂಡ ಅದ್ಭುತ ಟೆನಿಸ್ ಪ್ಲೇಯರ್ ಅಂದರೆ ಅದು ಕಾರ್ಲೋಸ್ ಆಲ್ಕಾರೆಜ್. ಈತನ ವಯಸ್ಸು ಕೇವಲ 19 ವರ್ಷ 4 ತಿಂಗಳು. ಇದು ಈತನಿಗೆ ಮೊದಲ ಯುಎಸ್ ಓಪನ್ ಫೈನಲ್ (US Open Final). ಪೀಟ್ ಸಾಂಪ್ರಾಸ್ (Pete Sampras) 19 ವರ್ಷ 1 ತಿಂಗಳಲ್ಲಿ ಯುಎಸ್ ಓಪನ್ ಫೈನಲ್ಗೇರಿದ್ದರು. ಆ ಬಳಿಕ ಆಲ್ಕಾರೆಜ್ ಈ ಸಾಧನೆ ಮಾಡಿದ ಅತಿ ಕಿರಿಯ. ಇಲ್ಲಿ ಆಲ್ಕಾರೆಜ್ ಪ್ರಶಸ್ತಿ ಗೆದ್ದರೆ ಯುಎಸ್ ಓಪನ್ ಗೆದ್ದ 2ನೇ ಟೀನೇಜರ್ ಅನ್ನುವ ಖ್ಯಾತಿ ಪಡೆಯಲಿದ್ದಾರೆ.
ನಾರ್ವೆಯ ಕ್ಯಾಸ್ಪರ್ ರುಡ್ಗೆ 23ವರ್ಷ ವಯಸ್ಸು. ಕೆಲ ತಿಂಗಳು ಹಿಂದೆ ನಡೆದ ಫ್ರೆಂಚ್ ಓಪನ್ನಲ್ಲಿ (French Open) ರುಡ್ ಫೈನಲ್ ಪ್ರವೇಶಿಸಿದ್ದರು. ಪ್ರಶಸ್ತಿ ಕಾದಾಟದಲ್ಲಿ ರುಡ್ ಸ್ಪೇನ್ ಗೂಳಿ ನಡಾಲ್ ವಿರುದ್ಧವೇ 3 ಗಂಟೆಗಳಿಗೂ ಹೆಚ್ಚು ಕಾಲ ಆಡಿದ್ದರು. ಆವೆ ಮಣ್ಣಿನ ರಾಜನನ್ನೇ ಖೆಡ್ಡಾಕ್ಕೆ ಬೀಳಿಸುವ ಪ್ಲಾನ್ನಲ್ಲಿದ್ದರು. ಆದರೆ ಅಂತಿಮ ಹಂತದಲ್ಲಿ ಎಡವಿದರು.
ಇಬ್ಬರು ಆಟಗಾರರು ಮ್ಯಾರಾಥಾನ್ ಆಟ ಆಡುವುದರಲ್ಲಿ ನಿಪುಣರು. ಫಿಟ್ನೆಸ್ಗೆ ಒಂಚೂರು ಸಮಸ್ಯೆ ಇಲ್ಲ. ಹೀಗಾಗಿ ಯುಎಸ್ ಓಪನ್ ಫೈನಲ್ನಲ್ಲಿ ಈ ಬಾರಿ ನೇರ ಸೆಟ್ಗಳ ಗೆಲುವು ಅನಿರೀಕ್ಷಿತ. ಯಾರೆ ಗೆದ್ದರೂ ಹೊಸ ಇತಿಹಾಸ ಗ್ಯಾರೆಂಟಿ.