ಕೇರ್ನ್ಸ್ನಲ್ಲಿ ಆಸ್ಟ್ರೇಲಿಯಾ (Australia) ,ನ್ಯೂಜಿಲೆಂಡ್ (Newzealand) ವಿರುದ್ಧದ ಏಕದಿನ ಸರಣಿಯನ್ನು (ODI Series) ಕ್ಲೀನ್ಸ್ವೀಪ್ (Clean Sweep) ಮಾಡಿದೆ. ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನಾಯಕ ಆರೋನ್ ಫಿಂಚ್ಗೆ ವಿದಾಯ ಕೋರಿದೆ (Finch Retires). ಆಸ್ಟ್ರೇಲಿಯಾದ (Aus) ಗೆಲುವಿನಲ್ಲಿ ಸ್ಟೀವನ್ ಸ್ಮಿತ್ (Steven Smith) ಸಿಡಿಸಿದ ಆಕರ್ಷಕ ಶತಕ, ಮಿಚೆಲ್ ಸ್ಟಾರ್ಕ್ (Mitchel Starc), ಶಾನ್ ಅಬೋಟ್ (Sean Abbott) ಮತ್ತು ಕೆಮರೂನ್ ಗ್ರೀನ್ (Cameroon Green) ನೀಡಿದ ಬೌಲಿಂಗ್ ಪ್ರದರ್ಶನ ಗಮನ ಸೆಳೆಯಿತು.
ತನ್ನ ಕಟ್ಟ ಕಡೆಯ ಪಂದ್ಯದಲ್ಲಿ ಆರೋನ್ ಫಿಂಚ್ಗೆ ಟಾಸ್ ಒಲಿಯಲಿಲ್ಲ. ಹೀಗಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ (Aus VS Nz) ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಹೊಸ ಪಾರ್ಟ್ನರ್ ಜೋಶ್ ಇಂಗ್ಲಿಸ್ ಜೊತೆ ತನ್ನ ಕಟ್ಟಕಡೆಯ ಏಕದಿನ ಇನ್ನಿಂಗ್ಸ್ನ್ನು ಫಿಂಚ್ ಅರಂಭಿಸಿದರು. 10 ರನ್ಗಳಿಸಿ ಇಂಗ್ಲಿಸ್ ಮೊದಲಿಗರಾಗಿ ಔಟಾದರು. ಕೊನೆಯ ಇನ್ನಿಂಗ್ಸ್ನಲ್ಲಿ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮಾಡಿದ್ದ ಫಿಂಚ್ 5 ರನ್ಗಳಿಸಿದ್ದಾಗ ಟಿಮ್ ಸೌಥಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಸ್ಟೀವನ್ ಸ್ಮಿತ್ ಮತ್ತು ಮಾರ್ನಸ್ ಲಬುಶಂಗೆ ಹಳಿತಪ್ಪಿದ ಆಸೀಸ್ ಇನ್ನಿಂಗ್ಸ್ಗೆ ಜೀವ ತುಂಬಿದರು. ಈ ಜೋಡಿ 3ನೇ ವಿಕೆಟ್ಗೆ 118 ರನ್ಗಳ ಜೊತೆಯಾಟ ಆಡಿದರು. ಕೊಂಚ ಅಕ್ರಮಣಕಾರಿಯಾಗಿ ಆಡಿ ಲಬುಶಂಗೆ ಮೊದಲಿಗರಾಗಿ ಅರ್ಧಶತಕ ಪೂರೈಸಿದರು. 52 ರನ್ಗಳಿಸಿದ್ದ ಲಬುಶಂಗೆ ಫರ್ಗ್ಯೂಸನ್ ಎಸೆತದಲ್ಲಿ ಔಟಾದರು.
ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ನಡುವೆ 69 ರನ್ಗಳ ಜೊತೆಯಾಟ ಬಂತು. ಅಷ್ಟೇ ಅಲ್ಲ ಸ್ಟೀವನ್ ಸ್ಮಿತ್ ತನ್ನ ಶತಕ ಸಂಭ್ರಮವನ್ನು ಕೂಡ ಆಚರಿಸಿಕೊಂಡರು. ಸ್ಮಿತ್ 131 ಎಸೆತಗಳಲ್ಲಿ 11 ಫೋರ್ ಮತ್ತು 1 ಸಿಕ್ಸರ್ ಮೂಲಕ 105 ರನ್ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಗ್ಲೆನ್ ಮ್ಯಾಕ್ಸ್ವೆಲ್ 14 ರನ್ಗಳಿಸಿ ಬೋಲ್ಟ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯಲ್ಲಿ ಅಲೆಕ್ಸ್ ಕ್ಯಾರಿ 43 ಎಸೆತಗಳಲ್ಲಿ ಅಜೇಯ 42 ರನ್ ಮತ್ತು ಕೆಮರೂನ್ ಗ್ರೀನ್ 12 ಎಸೆತಗಳಲ್ಲಿ ಅಜೇಯ 25 ರನ್ ಸಿಡಿಸಿ ತಂಡದ ಮೊತ್ತವನ್ನು 50 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 267ಕ್ಕೆ ತಲುಪಿಸಿದರು.
ನ್ಯೂಜಿಲೆಂಡ್ಗೆ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೆ 49 ರನ್ಗಳ ಆರಂಭ ತಂದುಕೊಟ್ಟರು. ಆದರೆ ಶಾನ್ ಅಬೋಟ್ 21 ರನ್ಗಳಿಸಿದ್ದ ಕಾನ್ವೆ ವಿಕೆಟ್ ಹಾರಿಸಿದರು. 35 ರನ್ಗಳಿಸಿದ್ದ ಅಲೆನ್ ಗ್ರೀನ್ಗೆ ವಿಕೆಟ್ ಒಪ್ಪಿಸಿದರು. 10 ರನ್ಗಳಿಸಿದ್ದ ಟಾಮ್ ಲೇಥಮ್ ಝಂಪಾಗೆ ಬಲಿಯಾದರೆ, 16 ರನ್ಗಳಿಸಿದ ಡೆರಿಲ್ ಮಿಚೆಲ್ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. 27 ರನ್ಗಳಿಸಿದ್ದ ಕೇನ್ ವಿಲಿಯಮ್ಸನ್ ರನೌಟ್ ಬಲೆಯಲ್ಲಿ ಬಿದ್ದರು.
ಗ್ಲೆನ್ ಫಿಲಿಪ್ಸ್ ಮತ್ತು ಜೇಮ್ಸ್ ನಿಶಾಮ್ ನಡುವೆ 6ನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ಬಂದಿತ್ತು. ಆದರೆ ಗ್ರೀನ್ 36 ರನ್ಗಳಿಸಿದ್ದ ನಿಶಾಮ್ ವಿಕೆಟ್ ಹಾರಿಸಿದರು. ಫಿಲಿಪ್ಸ್ ಮತ್ತು ಮಿಚೆಲ್ ಸ್ನಾಂಟ್ನರ್ ಹೋರಾಟ ಮುಂದುವರೆಸಿದರು, 7ನೇ ವಿಕೆಟ್ಗೆ 51 ರನ್ಗಳ ಜೊತೆಯಾಟ ತಂದರು. ಆದರೆ ಸ್ಟಾರ್ಕ್ ಎಸೆತದಲ್ಲಿ ಅಬೋಟ್ ಹಿಡಿದ ಅದ್ಭುತ ಕ್ಯಾಚ್ಗೆ ಫಿಲಿಪ್ಸ್ ಇನ್ನಿಂಗ್ಸ್ 47 ರನ್ಗೆ ಕೊನೆಯಾಯಿತು. 30 ರನ್ಗಳಿಸಿದ್ದ ಸ್ಯಾಂಟ್ನರ್ ಕೂಡ ಔಟಾದರು. ಕೊನೆಯಲ್ಲಿ ಸೌಥಿ ಮತ್ತು ಫರ್ಗ್ಯೂಸನ್ ಬಿರುಸಿನ ಆಟಕ್ಕೆ ಪ್ರಯತ್ನ ಪಟ್ಟರೂ ಅದು ಯಶಸ್ಸು ಕೊಡಲಿಲ್ಲ. ಅಷ್ಟೇ ಅಲ್ಲ 49.5 ಓವರುಗಳಲ್ಲಿ 242 ರನ್ಗಳಿಗೆ ಆಲೌಟ್ ಆಗಿ 26 ರನ್ಗಳ ಸೋಲನುಭವಿಸಿತು. ಸ್ಟಾರ್ಕ್ 3 , ಗ್ರೀನ್ ಮತ್ತು ಅಬೋಟ್ ತಲಾ 2 ವಿಕೆಟ್ ಪಡೆದರು.