ಟೀಂ ಇಂಡಿಯಾ(Team India)ದ ಯುವ ವೇಗದ ಬೌಲರ್ ಉಮ್ರಾನ್ ಮಲ್ಲಿಕ್(Umran Malik), ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಿದ್ಧವಾಗಿಲ್ಲ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ(Akash Chopra) ಅಭಿಪ್ರಾಯಪಟ್ಟಿದ್ದಾರೆ.
ಭಾರತದ ʼಯಂಗ್ ಸ್ಪೀಡ್ ಗನ್ʼ ಉಮ್ರಾನ್ ಮಲ್ಲಿಕ್ ಪ್ರದರ್ಶನದ ಬಗ್ಗೆ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, “ಉಮ್ರಾನ್ ಮಲ್ಲಿಕ್ ಅದ್ಭುತ ವೇಗವನ್ನ ಹೊಂದಿದ್ದು, ಇದನ್ನು ಯಾರಿಗೂ ಹೇಳಿಕೊಡಲು ಸಾಧ್ಯವಿಲ್ಲ. ಇದರ ಹೊರತಾಗಿ ಲೈನ್ ಮತ್ತು ಲೆಂಥ್, ಯಾರ್ಕರ್, ಬೌನ್ಸರ್, ಸ್ಲೋ ಬಾಲ್ಗಳ ಬಗ್ಗೆ ಹೇಳಿಕೊಡಬಹುದಷ್ಟೇ. ಇದರ ಬದಲಾಗಿ ಯಾವ ರೀತಿಯಲ್ಲಿ ವೇಗದ ಬೌಲಿಂಗ್ ಮಾಡಬೇಕೆಂದು ಹೇಳಿಕೊಡಲು ಸಾಧ್ಯವಿಲ್ಲ. ಹೀಗಾಗಿ ನೀವು ಕ್ರಿಕೆಟ್ನಲ್ಲಿ ಆರಂಭದಿಂದಲೇ ವೇಗದ ಬೌಲರ್ ಆಗಿರಬೇಕು ಅಥವಾ ಮಧ್ಯಮ ವೇಗಿಯಾಗಿರಬೇಕು” ಎಂದಿದ್ದಾರೆ.
ಹೀಗಾಗಿ 22 ವರ್ಷದ ವೇಗದ ಬೌಲರ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಡಲು ಇನ್ನೂ ತಯಾರಿಲ್ಲ. ಆತನಿಗೆ ಇನ್ನಷ್ಟು ಸಮಯದ ಅಗತ್ಯವಿದೆ. ಆತನ ಬೌಲಿಂಗ್ನಲ್ಲಿ ಖಂಡಿತವಾಗಿ ವೇಗವಿದೆ, ಆದರೆ ನನ್ನ ಪ್ರಕಾರ ಸದ್ಯದ ಮಟ್ಟಿಗೆ ಉಮ್ರಾನ್ ಮಲ್ಲಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ತಯಾರಿಲ್ಲ. ಆತನಿಗೆ ಸಮಯದ ಅಗತ್ಯವಿದ್ದು, ಇನ್ನಷ್ಟು ಕ್ರಿಕೆಟ್ ಆಡುವ ಅಗತ್ಯವಿದೆ” ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
2022ರ ಐಪಿಎಲ್ನಲ್ಲಿ ಅದ್ಭುತ ಬೌಲಿಂಗ್ನಿಂದ ಮಿಂಚಿದ್ದ ಉಮ್ರಾನ್ ಮಲ್ಲಿಕ್, ಸನ್ರೈಸರ್ಸ್ ಹೈದ್ರಾಬಾದ್ ಪರ ಆಡಿದ 14 ಪಂದ್ಯಗಳಲ್ಲಿ 20.18ರ ಸರಾಸರಿಯಲ್ಲಿ 22 ವಿಕೆಟ್ ಪಡೆದು ಮಿಂಚಿದ್ದರು. ಇವರ ಈ ಪ್ರದರ್ಶನಕ್ಕೆ ಫಿದಾ ಆದ ಟೀಂ ಇಂಡಿಯಾ ಆಯ್ಕೆ ಸಮಿತಿ, ಯುವ ವೇಗದ ಬೌಲರ್ಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದರು. ಹೀಗಾಗಿ ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಆಡುವ ಅವಕಾಶ ಪಡೆದಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ತಂಡದ ಸ್ಥಾನ ಪಡೆದಿದ್ದ ಮಲ್ಲಿಕ್, ಕೇವಲ 1 ವಿಕೆಟ್ ಪಡೆದು 56 ರನ್ ನೀಡಿದ್ದರು.