ಮೆಹಿದಿ ಹಸನ್(4/29) ಹಾಗೂ ನಸುಮ್ ಅಹ್ಮೆದ್(3/19) ಚಾಣಾಕ್ಷ ಬೌಲಿಂಗ್ ಹಾಗೂ ತಮೀಮ್ ಇಕ್ಬಾಲ್(50*) ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಅತಿಥೇಯ ವೆಸ್ಟ್ ಇಂಡೀಸ್(West Indies), 2ನೇ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ.
ಗಯಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ(Bangladesh) ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪ್ರವಾಸಿ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ 35 ಓವರ್‌ಗಳಲ್ಲಿ ಕೇವಲ 108 ರನ್‌ಗಳಿಗೆ ಆಲೌಟ್ ಆಯಿತು. ಸುಲಭದ ಟಾರ್ಗೆಟ್ ಚೇಸ್ ಮಾಡಿದ ಬಾಂಗ್ಲಾದೇಶ 20.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 112 ರನ್‌ಗಳಿಸುವ ಮೂಲಕ ಭರ್ಜರಿ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ODI ಸರಣಿಯಲ್ಲಿ 2-0 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿತು.

ವಿಂಡೀಸ್ ಬ್ಯಾಟಿಂಗ್ ಉಡೀಸ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ವೆಸ್ಟ್ ಇಂಡೀಸ್ ಮೆಹಿದಿ ಹಸನ್(4/29) ಹಾಗೂ ನಸುಮ್ ಅಹ್ಮೆದ್(3/19) ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕರಾಗಿ ಬಂದ ಶೇಯ್ ಹೋಪ್(18), ಮೈಯರ್ಸ್(17) ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಇದಾದ ನಂತರ ಬಂದ ಬ್ರೂಕ್ಸ್(5), ಬ್ರಾಂಡನ್ ಕಿಂಗ್(11) ರನ್‌ಗಳಿಸಿ ಔಟಾದರೆ. ನಾಯಕ ನಿಕೋಲಸ್ ಪೂರನ್(0) ಡಕೌಟ್ ಆಗಿ ಹೊರ ನಡೆದರು. ಉಳಿದಂತೆ ಪೊವೆಲ್(13), ಅಕೇಲ್ ಹೊಸೈನ್(2), ಶೆಫರ್ಡ್(2) ಹಾಗೂ ಜೋಸೆಫ್(0) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೆಳ ಕ್ರಮಾಂಕದಲ್ಲಿ ಕೀಮೊ ಪೌಲ್(25*) ರನ್‌ಗಳಿಸಿ ತಂಡದ ಮೊತ್ತ 100ರ ಗಡಿದಾಟಿಸಿದರು.
ತಮೀಮ್ ಅರ್ಧಶತಕದ ಮಿಂಚು:
ವೆಸ್ಟ್ ಇಂಡೀಸ್ ನೀಡಿದ 109 ಟಾರ್ಗೆಟ್ ಎದುರಿಸಿದ ಬಾಂಗ್ಲಾದೇಶಕ್ಕೆ ತಮೀಮ್ ಇಕ್ಬಾಲ್(50*) ಹಾಗೂ ನಜ್ಮುಲ್ ಹೊಸೈನ್(20) ಮೊದಲ ವಿಕೆಟ್‌ಗೆ 48 ರನ್‌ಗಳ ಜೊತೆಯಾಟವಾಡಿದರು. ನಂತರ ಜೊತೆಯಾದ ತಮೀಮ್ ಹಾಗೂ ಲಿಟನ್ ದಾಸ್(32*) ಜವಾಬ್ದಾರಿ ಬ್ಯಾಟಿಂಗ್‌ನಿಂದ ತಂಡವನ್ನ ಗೆಲುವಿನ ದಡಸೇರಿಸಿದರು. ಭರ್ಜರಿ ಆಟವಾಡಿದ ತಮೀಮ್ ಇಕ್ಬಾಲ್, ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಉಭಯ ತಂಡಗಳ ನಡುವಿನ 3ನೇ ODI ಪಂದ್ಯ ಜು.16ರಂದು ನಡೆಯಲಿದೆ.