15ನೇ ಆವೃತ್ತಿಯ ಐಪಿಎಲ್ನಲ್ಲಿ ಬೌಲರ್ಗಳು ಹಲವು ಮ್ಯಾಚ್ಗಳನ್ನು ಗೆಲ್ಲಿಸಿಕೊಡುತ್ತಿದ್ದಾರೆ.s ಟೀಮ್ ಇಂಡಿಯಾವನ್ನು ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸುವ ಹಲವು ಆಟಗಾರರು ಐಪಿಎಲ್ ನಲ್ಲಿದ್ದರೂ ಪರ್ಪಲ್ ಕ್ಯಾಪ್ ಮಾತ್ರ ಟೆಸ್ಟ್ ಸ್ಪೆಷಲಿಸ್ಟ್ ಕೈಯಲ್ಲಿದೆ. ಕೆಕೆಆರ್ ಪರ ಆಡುತ್ತಿರುವ ಉಮೇಶ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿ ಮುನ್ನಡೆಯತ್ತಿದ್ದಾರೆ.
ಉಮೇಶ್ ಯಾದವ್ 4 ಪಂದ್ಯಗಳಲ್ಲಿ 9 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ಅಚ್ಚರಿ ಅಂದರೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರ 4 ಸ್ಥಾನವನ್ನು ಭಾರತೀಯ ಬೌಲರ್ಗಳೇ ಪಡೆದಿದ್ದಾರೆ. 5ನೇ ಸ್ಥಾನದಲ್ಲಿ ಟಿ20ಯ ನಂಬರ್ 1 ಬೌಲರ್ ವನಿಂದು ಹಸರಂಗ ಇದ್ದಾರೆ.