U19 WC-2022 – ದಕ್ಷಿನ ಆಫ್ರಿಕಾ ಮಣಿಸಿದ ಇಂಗ್ಲೆಂಡ್ ಸೆಮೀಸ್ ಗೆ ಎಂಟ್ರಿ..!
19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಆಂಟಿಗುವಾದ ಸರ್ ವಿವಿಯನ್ ರಿಚಡ್ರ್ಸ್ ಅಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರು ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 43.4 ಓವರ್ ಗಳಲ್ಲಿ 209 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ದಕ್ಷಿಣ ಆಫ್ರಿಕಾ ತಂಡದ ಪರ ಡ್ವೆವಾಲ್ಡ್ ಬ್ರೇವಿಸ್ ಅವರು ಆಕರ್ಷಕ 97 ರನ್ ಸಿಡಿಸಿದ್ರು. ಬ್ರೇವಿಸ್ ಅವರು 88 ಎಸೆತಗಳಲ್ಲಿ 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ರು. ಇನ್ನುಳಿದಂತೆ ದಕ್ಷಿಣ ಆಫ್ರಿಕಾ ಪರ ವಿಕೆಟ್ ಕೀಪರ್ ಗ್ರೆಹಾಂಡ್ಸ್ ಮಾರ್ರೆ 27 ರನ್ ಹಾಗೂ ಮ್ಯಾಥ್ಯೂ ಬೊಸ್ಟ್ 22 ರನ್ ಗಳಿಸಿದ್ರು. ಇಂಗ್ಲೆಂಡ್ ಪರ ಜೋಶುವಾ ಬೈಡನ್ ಮತ್ತು ಜೇಮ್ಸ್ ಸೇಲ್ಸ್ ತಲಾ ಎರಡು ವಿಕೆಟ್ ಪಡೆದ್ರೆ, ರೆಹಾನ್ ಅಹಮ್ಮದ್ 48ಕ್ಕೆ 4 ವಿಕೆಟ್ ಉರುಳಿಸಿ ದಕ್ಷಿಣ ಆಫ್ರಿಕಾಗೆ ಆಘಾತ ನೀಡಿದ್ರು
U19 WC-2022 – England defeat South Africa to reach Super League semis
ಸುಲಭ ಸವಾಲನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 31.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಇಂಗ್ಲೆಂಡ್ ತಂಡದ ಪರ ಜೇಕಬ್ ಬೆಥೆಲ್ ಮತ್ತು ವಿಲಿಯಮ್ ಲಕ್ಸಟನ್ 47 ರನ್ ದಾಖಲಿಸಿದ್ರು. ಜೇಕಬ್ ಬೆಥೆಲ್ 42 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ ಗಳ ಸಹಾಯದಿಂದ 88 ರನ್ ದಾಖಲಿಸಿದ್ರು.
ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ಅಥವಾ ಆಫಘಾನಿಸ್ತಾನ ತಂಡದ ವಿರುದ್ದ ಆಡಲಿದೆ.