Virat is like a beast on the field
ವಿರಾಟ್ ಕೊಹ್ಲಿ.. ಆಧುನಿಕ ಕ್ರಿಕೆಟ್ ಜಗತ್ತಿನ ರಣ ಬೇಟೆಗಾರ. ಕೈಯಲ್ಲಿ ಬ್ಯಾಟ್ ಹಿಡಿದು ಕ್ರೀಸ್‍ನಲ್ಲಿದ್ದಷ್ಟು ಸಮಯ ಎದುರಾಳಿ ತಂಡಗಳಿಗೆ ಉಗ್ರ ನರಸಿಂಹ…
ಎದುರಾಳಿ ತಂಡಗಳು ಬ್ಯಾಟಿಂಗ್ ಮಾಡುವಾಗ ಮೃಗದಂತೆ ರ್ತಿಸುತ್ತಾರೆ. ಆಕ್ರಮಕಾರಿ ಪ್ರವೃತ್ತಿಯೇ Virat Kohli ವಿರಾಟ್ ಕೊಹ್ಲಿಯ ಯಶಸ್ಸಿನ ಮೂಲ ಮಂತ್ರ. ಯಾರು ಏನು ಹೇಳ್ತಾರೆ ಅನ್ನೋದರ ಬಗ್ಗೆ ಒಂಚೂರು ತಲೆಕೆಡಿಸಿಕೊಳ್ಳುವುದಿಲ್ಲ. ಸ್ಪರ್ಧೆ ಮಾಡಬೇಕು. ಗೆಲುವು ಸಾಧಿಸಬೇಕು. ಅದಕ್ಕಾಗಿ ಏನು ಬೇಕಾದ್ರೂ ಮಾಡಲು ರೆಡಿಯಾಗಿರುತ್ತಾರೆ ವಿರಾಟ್ ಕೊಹ್ಲಿ. ಅಂತಹ ವಿರಾಟ್ ಕೊಹ್ಲಿ ಈಗ ವಿವಾದದ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಟೀಮ್ ಇಂಡಿಯಾದ ನಾಯಕನಾಗಿ ಗೆಲುವಿನ ಉತ್ತುಂಗಕ್ಕೇರಿದ್ದ ವಿರಾಟ್ ಈಗ ಪಾತಾಳಕ್ಕೆ ಕುಸಿದಿದ್ದಾರೆ. ಆದ್ರೂ ತನ್ನ ವರ್ಚಸ್ಸು, ವರ್ತನೆ, ಹಾವಭಾವ, ಆಟದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಇದು ವಿರಾಟ್ ಕೊಹ್ಲಿಯ ಶಕ್ತಿ. ಅಂದ ಹಾಗೇ ಈ ನಾಯಕತ್ವ ವಿಚಾರವೇ ವಿರಾಟ್ ಕೊಹ್ಲಿಯ ಚಂದದ ಕ್ರಿಕೆಟ್ ಬದುಕಿಗೆ ಕೊಡಲಿಪೆಟ್ಟು ನೀಡಿದೆ.
ಅಂದ ಹಾಗೇ 2021ರ ಐಪಿಎಲ್ IPL ಟೂರ್ನಿ ಆರಂಭವಾಗುವುದಕ್ಕಿಂತ ಮುನ್ನ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ ಯಾವಾಗ ಸಾಮಾಜಿಕ ಜಾಲ ತಾಣದಲ್ಲಿ ಈ ಬಾರಿ ಕಪ್ ನಮ್ದೆ ಅಂತ ಅಭಿಯಾನ ಶುರು ಮಾಡಿದ್ರೋ ಅಲ್ಲಿಂದಲೇ ವಿರಾಟ್ ಮನಸು ಕೂಡ ವಿಚಲಿತವಾಯ್ತು. ಅಷ್ಟೇ ಅಲ್ಲ, ನಾಯಕನಾಗಿ ಇದೇ ಕೊನೆಯ ಬಾರಿ ಆರ್ ಸಿಬಿ RCB ತಂಡವನ್ನು ಮುನ್ನಡೆಸುವುದಾಗಿ ಘೋಷಣೆ ಕೂಡ ಮಾಡಿದ್ದರು. ಆದ್ರೆ ವಿರಾಟ್ ದುರಾದೃಷ್ಟವೋ ಏನೋ ಆರ್ ಸಿಬಿ ಕಪ್ ಗೆಲ್ಲಲಿಲ್ಲ. ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕತ್ವದಿಂದ ಕೆಳಗಿಳಿದ್ರು. ನಂತರ 2021ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ನಿಂದ ಹೊರಬಿದ್ದಾಗ ವಿರಾಟ್ ಕೊಹ್ಲಿ ನಾಯಕತ್ವ ಪ್ರಶ್ನೆಯಾಗಿ ಕಾಡಿತ್ತು. ಮಹತ್ವದ ಐಸಿಸಿ ಟೂರ್ನಿಗಳಲ್ಲಿ ವಿರಾಟ್ ಕಪ್ ಗೆಲ್ಲಲಿಲ್ಲ ಅನ್ನೋ ಒತ್ತಡವನ್ನು ವಿರಾಟ್ ಮೇಲೆ ಹೇರಲಾಗಿತ್ತು. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ವಿರಾಟ್ ಕೊಹ್ಲಿ ಟಿ-20 T-20 ನಾಯಕತ್ವವನ್ನು ತ್ಯಜಿಸಿದ್ರು. ಈ ನಡುವೆ, ಬಿಸಿಸಿಐ ಬಿಗ್ ಬಾಸ್ Bigg Boss ಸೌರವ್ ಗಂಗೂಲಿ ಮತ್ತು ವಿರಾಟ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿತ್ತು. ಹೀಗಾಗಿ ಏಕಾಏಕಿ ವಿರಾಟ್ ಕೊಹ್ಲಿಯವರನ್ನು ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಸಲಾಯ್ತು. ಇದರಿಂದ ಕುಪಿತಗೊಂಡ ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ಸೌರವ್ ಗಂಗೂಲಿ ವಿರುದ್ದವೇ ಹೇಳಿಕೆ ನೀಡಿದ್ದರು. ನಂತರ ನಡೆದ್ದಿದ್ದು ದಾದಾ ಮತ್ತು ಕೊಹ್ಲಿ ನಡುವಿನ ಒಳಜಗಳ ಗುಟ್ಟಾಗಿ ಉಳಿದಿಲ್ಲ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ಸಡನ್ ಆಗಿಯೇ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಹೊರಬಂದ್ರು. ಈ ಮೂಲಕ ಬಿಸಿಸಿಐಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ ತಾನು ಸಾಮಾನ್ಯ ಆಟಗಾರನಾಗಿ ಟೀಮ್ ಇಂಡಿಯಾದಲ್ಲಿರುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ರು.
ಆದ್ರೆ ಬಿಸಿಸಿಐ, ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯವರನ್ನು ಕಟ್ಟಿ ಹಾಕಲು ಈ ರೀತಿಯ ಪ್ಲಾನ್ ಮಾಡಿರೋ ವಿಚಾರ ಕೂಡ ವಿರಾಟ್ ಗೆ ಗೊತ್ತಿಲ್ಲದ ವಿಷ್ಯವೇನೂ ಅಲ್ಲ. ಮುಖ್ಯವಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ Rahul Dravid ರಾಹುಲ್ ದ್ರಾವಿಡ್. ಹೌದು, ಎಲ್ಲರಿಗೂ ಗೊತ್ತಿರುವ ಹಾಗೇ ರಾಹುಲ್ ದ್ರಾವಿಡ್ ಆರಂಭದಲ್ಲೇ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕಾರಣ ನಾಯಕ ವಿರಾಟ್ ಕೊಹ್ಲಿ. ಈ ಹಿಂದೆ ವಿರಾಟ್ ನಾಯಕನಾಗಿದ್ದಾಗ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದರು. ಆಗ ವಿರಾಟ್ ಮತ್ತು ಕುಂಬ್ಳೆ ನಡುವೆ ಮನಸ್ತಾಪ ಮೂಡಿತ್ತು ಅಲ್ಲದೆ ವಿರಾಟ್ ಕುಂಬ್ಳೆಗೆ ಅವಮಾನ ಮಾಡಿದ್ದರು. ಇಂತಹ ಪರಿಸ್ಥಿತಿ ನನಗೂ ಬರಬಾರದು ಅಂತ ದ್ರಾವಿಡ್ ಹೆಡ್ ಕೋಚ್ ಹುದ್ದೆಯನ್ನು ತಿರಸ್ಕರಿಸಿದ್ರು. ಆದ್ರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ಲಾನ್ ಮಾಡಿಕೊಂಡು ರಾಹುಲ್ ದ್ರಾವಿಡ್ ಅವರನ್ನು ಹೆಡ್ ಕೋಚ್ ಆಗುವಂತೆ ಮನವೊಲಿಸಿದ್ದರು. ಅದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿಕೊಂಡು ವಿರಾಟ್ ಕೊಹ್ಲಿಯವರನ್ನು ನಾಯಕತ್ವದಿಂದ ಕೆಳಗಿಳಿಸುವಂತೆ ಮಾಡಿದ್ರು.
ಏತನ್ಮಧ್ಯೆ, ರಾಹುಲ್ ದ್ರಾವಿಡ್ ಮನಸ್ಥಿತಿ ಮತ್ತು ವಿರಾಟ್ ಕೊಹ್ಲಿ ಮನಸ್ಥಿತಿ ಭಿನ್ನವಾಗಿತ್ತು. ಆದ್ರೆ ವಿರಾಟ್ ಮತ್ತು ಈ ಹಿಂದಿನ ಕೋಚ್ ಆಗಿದ್ದ ರವಿಶಾಸ್ತ್ರಿ Ravi Shastri ಬಾಂಧವ್ಯ ಚೆನ್ನಾಗಿಯೇ ಇತ್ತು. ಹೀಗಾಗಿ ಟೀಮ್ ಇಂಡಿಯಾದಲ್ಲಿ ಏನೇ ಭಿನ್ನಾಭಿಪ್ರಾಯಗಳು ಇದ್ರೂ ಅದು ಹೊರಜಗತ್ತಿಗೆ ಗೊತ್ತಾಗುತ್ತಿರಲಿಲ್ಲ. ಈ ಹಿಂದೆ ಧೋನಿ ಮತ್ತು ಗ್ಯಾರಿ ಕಸ್ಟರ್ನ್, ಸೌರವ್ ಗಂಗೂಲಿ Saurav Ganguly ಮತ್ತು ಜಾನ್ ರೈಟ್ ಕಾಂಬಿನೇಷನ್ ನಲ್ಲೂ ಟೀಮ್ ಇಂಡಿಯಾ ಅದ್ಭುತವಾದ ಪ್ರದರ್ಶನನ್ನು ನೀಡಿತ್ತು. ಇದೀಗ ರೋಹಿತ್ ಮತ್ತು ರಾಹುಲ್ ದ್ರಾವಿಡ್ ಕಾಂಬಿನೇಷನ್ ಯಾವ ರೀತಿ ವರ್ಕ್ ಔಟ್ ಆಗುತ್ತೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು. ಒಂದಂತೂ ನಿಜ, ದೊಸ್ತಿಗಳ ವಿಚಾರದಲ್ಲಿ ವಿರಾಟ್ ಬಲಿಯಾಗಿದ್ದಾರಾ ಅನ್ನೋ ಅನುಮಾನ ಕೂಡ ಮೂಡುತ್ತಿದೆ. ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿನ ಸ್ನೇಹಿತರ ಸವಾಲಿಗೆ ವಿರಾಟ್ ಸೈಲೆಂಟ್ ಆಗಬೇಕಾಯ್ತು ಎಂಬುದು ತುಸು ಬೇಸರದ ಸಂಗತಿ.
ಅಂದ ಹಾಗೇ ವಿರಾಟ್ ಕೊಹ್ಲಿಗೆ ಈಗ 33ರ ಹರೆಯ. ಇನ್ನು ಕನಿಷ್ಠ ಐದು ವರ್ಷ ಆಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಇನ್ನು ಐದು ವರ್ಷ ಆಡಿದ್ರೆ ವಿಶ್ವ ಕ್ರಿಕೆಟ್ ನ ಬಹುತೇಕ ದಾಖಲೆಗಳು ಅವರ ಹೆಸರಿಗೆ ಅಂಟಿಕೊಳ್ಳಲಿವೆ. ಅದರಲ್ಲೂ ಸಚಿನ್ ತೆಂಡುಲ್ಕರ್ ದಾಖಲೆಗಳು ಇತಿಹಾಸ ಪುಟ ಸೇರಿಕೊಂಡು ವಿರಾಟ್ ಕೊಹ್ಲಿ ಹೆಸರು ರಾರಾಜಿಸಬಹುದು. ಅಷ್ಟೇ ಅಲ್ಲ, ನಾಯಕನಾಗಿ ವಿರಾಟ್ ಕೊಹ್ಲಿ ಕನಿಷ್ಠ ಎರಡು ವರ್ಷ ಮುಂದುವರಿಯುತ್ತಿದ್ರೆ ವಿಶ್ವ ಕ್ರಿಕೆಟ್ ನಂಬರ್ ವನ್ ನಾಯಕನಾಗುವ ಸಾಧ್ಯತೆಗಳಿದ್ದವು. ಮುಂದಿನ ಎರಡು ವರ್ಷ ತವರಿನಲ್ಲೇ ಹೆಚ್ಚು ಸರಣಿಗಳು ನಡೆಯುತ್ತಿರುವುದರಿಂದ ಟೀಮ್ ಇಂಡಿಯಾದ ಗೆಲುವಿನ ಓಟಕ್ಕೆ ತೊಂದರೆಯಾಗುತ್ತಿರಲಿಲ್ಲ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿಯವರನ್ನು ಮಟ್ಟ ಹಾಕಬೇಕು ಅನ್ನೋ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿತ್ತಾ ಅನ್ನೋ ಸಂದೇಹ ಕೂಡ ಕೊಹ್ಲಿ ಅಭಿಮಾನಿಗಳಲ್ಲಿದೆ. ಏನೇ ಆಗ್ಲಿ, ವಿರಾಟ್ ಕೊಹ್ಲಿ ಒಬ್ಬ ಆಟಗಾರನಾಗಿ, ನಾಯಕನಾಗಿ, ಒಬ್ಬ ಬ್ಯಾಟ್ಸ್ ಮೆನ್ ಆಗಿ ಏನು ಮಾಡಬೇಕೋ ಅದನ್ನು ಬದ್ದತೆಯಿಂದಲೇ ಮಾಡಿದ್ದಾರೆ. ಬಹುಶಃ ಅವರ ವರ್ತನೆ, ಆಕ್ರಮಣಕಾರಿ ಪ್ರವೃತ್ತಿ, ಸಾಧನೆ, ಯಶಸ್ಸು ಕೆಲವರಿಗೆ ಮತ್ಸರವನ್ನುಂಟು ಮಾಡಿರಬಹುದು. ಹಾಗಂತ ಒಬ್ಬ ಅದ್ಭುತ ಆಟಗಾರರನ್ನು ಈ ರೀತಿಯಾಗಿ ಅವಮಾನ ಮಾಡಿರುವುದು ಬಿಸಿಸಿಐಗೆ BCCI ಶೋಭೆ ತರಲ್ಲ. ಹಾಗಂತ ಇದರಲ್ಲಿ ಅಚ್ಚರಿ ಪಡುವಂತಹುದ್ದು ಏನು ಇಲ್ಲ. ಯಾಕಂದ್ರೆ ಬಿಸಿಸಿಐನ ಜಾಯಮಾನವೇ ಅಂತಹುದ್ದು. ಭಾರತದ ಶ್ರೇಷ್ಠ ಆಟಗಾರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡ ಉದಾಹರಣಗಳು ಇಲ್ಲ. ಸುನೀಲ್ ಗವಾಸ್ಕರ್, Sunil Gavaskar ಕಪಿಲ್ ದೇವ್ Kapil Dev, ಸಚಿನ್ ತೆಂಡುಲ್ಕರ್ Sachin Tendulkar, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ Mahendra Singh Dhoni, ಈಗ ವಿರಾಟ್ ಕೊಹ್ಲಿ. ಎಲ್ಲರನ್ನು ಅವಮಾನ ಮಾಡಿಸಿಯೆ ಅವರ ಕ್ರಿಕೆಟ್ ಬದುಕಿಗೆ ಪೆಟ್ಟು ನೀಡಿರುವುದು ಬಿಸಿಸಿಐನ ಬಿಗ್ ಬಾಸ್‍ಗಳು ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ. ಹಾಗಂತ ವಿರಾಟ್ ಕೊಹ್ಲಿ ತಪ್ಪೇ ಮಾಡಿಲ್ಲ ಅಂತನೂ ಹೇಳಲು ಸಾಧ್ಯವಿಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದಾರೆ. ವಿರಾಟ್ ಕೊಹ್ಲಿ ತಂಡದ ಎಲ್ಲ ಆಟಗಾರರ ವಿಶ್ವಾಸವನ್ನು ಗಳಿಸುತ್ತಿರಲಿಲ್ಲ. ಕೆಲವು ಆಟಗಾರರ ಜೊತೆ ಮಾತ್ರ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ತಂಡದೊಳಗೆ ಭಿನ್ನಾಭಿಪ್ರಾಯಗಳು ಇದ್ದವು. ಡ್ರೆಸಿಂಗ್ ರೂಮ್ ನ ವಾತಾವರಣ ಚೆನ್ನಾಗಿರಲಿಲ್ಲ. ಹಿರಿಯ ಆಟಗಾರರನ್ನು ಕಡೆಗಣಿಸುತ್ತಿದ್ದರು ಎಂಬ ಆರೋಪವೂ ವಿರಾಟ್ ಕೊಹ್ಲಿ ಮೇಲೆ ಕೇಳಿಬಂದಿದ್ದವು. ಅದ್ರಲ್ಲೂ ಮುಖ್ಯವಾಗಿ ಆರ್. ಅಶ್ವಿನ್ ಜೊತೆಗೆ ವಿರಾಟ್ ಕೊಹ್ಲಿ ಸಂಬಂಧ ಚೆನ್ನಾಗಿರಲಿಲ್ಲ. ಕುಲದೀಪ್ ಯಾದವ್ ಜೊತೆಗೂ ಅಷ್ಟಕ್ಕಷ್ಟೇ. ರೋಹಿತ್ ಶರ್ಮಾ ಜೊತೆಗೂ ಭಿನ್ನಾಭಿಪ್ರಾಯವಿತ್ತು. ಆದ್ರೆ ಟೀಮ್ ಇಂಡಿಯಾದ ಯಶಸ್ಸು ತಂಡದಲ್ಲಿದ್ದ ಎಲ್ಲಾ ತಪ್ಪು, ಭಿನ್ನಾಭಿಪ್ರಾಯಗಳನ್ನು ಮರೆ ಮಾಚುವಂತೆ ಮಾಡಿತ್ತು.
ಆದ್ರೆ ಒಂದು ಸರಣಿ ಸೋಲು, ಅಥವಾ ಒಂದು ಸೋಲು ಎಲ್ಲವನ್ನು ಹೊರಜಗತ್ತಿಗೆ ತೋರಿಸುತ್ತದೆ ಎಂಬುದು ಅಷ್ಟೇ ಸತ್ಯ. ಮತ್ತೊಂದೆಡೆ ವಿರಾಟ್ ಕೊಹ್ಲಿ ಣಾಯಕತ್ವದಲ್ಲಿ ಟೀಮ್ ಇಂಡಿಯಾ ಪ್ರತಿಷ್ಠಿತ ಐಸಿಸಿ ಟೂರ್ನಿಗಳನ್ನು ಗೆದ್ದಿಲ್ಲ ಅನ್ನೋ ಅಪವಾದವೂ ಇದೆ. ಆದ್ರೆ ಈ ಅಪವಾದವನ್ನು ಒಪ್ಪಿಕೊಳ್ಳುವುದು ಕಷ್ಟ. ಶ್ರೇಷ್ಠ ಆಟಗಾರರು ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲೇಬೇಕು ಎಂಬ ವಾದವೂ ಸರಿಯಲ್ಲ. ಸಚಿನ್ ತೆಂಡುಲ್ಕರ್ ಒಂದು ವಿಶ್ವಕಪ್ ಗೆಲ್ಲಲು ಆರು ವಿಶ್ವ ಕಪ್ ಟೂರ್ನಿಗಳನ್ನು ಆಡಿದ್ದರು. ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ VVS Laxman ವಿಶ್ವಕಪ್ ಗೆದ್ದಿಲ್ಲ ಆದ್ರೆ ಆಸ್ಟ್ರೇಲಿಯಾ ವಿರುದ್ದ ಐತಿಹಾಸಿಕ ಕೊಲ್ಲತ್ತಾ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಹಾಗೇ ಟೀಮ್ ಸೌರವ್ ಗಂಗೂಲಿ ಕೂಡ ವಿಶ್ವಕಪ್ ಗೆದ್ದಿಲ್ಲ. ಆದ್ರೆ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದು ಗಂಗೂಲಿ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಂತ ನಾಯಕನಾದವನು ಐಸಿಸಿ ಟ್ರೋಫಿಯನ್ನು ಗೆಲ್ಲಲೇಬೇಕು ಎಂಬ ಮಾನದಂಡ ಸರಿಯಲ್ಲ. ಒಂದು ವೇಳೆ ಬಿಸಿಸಿಯ ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ವಿರಾಟ್ ಕೊಹ್ಲಿಯವರನ್ನು ನಾಯಕತ್ವದಿಂದ ಕೆಳಗಿಳಿಸಿದ್ರೆ ಅದಕ್ಕಿಂತ ದೊಡ್ಡ ಮುರ್ಖತನ ಬೇರೊಂದು ಇಲ್ಲ.
ಒಟ್ಟಾರೆ, ವಿರಾಟ್ ಕೊಹ್ಲಿ ನಾಯಕನಾಗಿ ಕೆಳಗಿಳಿದಿರಬಹುದು. ಆದ್ರೆ ಆಟಗಾರನಾಗಿ ಟೀಮ್ ಇಂಡಿಯಾಗೆ India ಅವರ ಸೇವೆ ಇನ್ನೂ ಬೇಕು. ವಿರಾಟ್ ಕೊಹ್ಲಿ ವಿರಾಟ ರೂಪ ಪ್ರದರ್ಶಿಸಿದ್ರೆ ಏನು ಆಗಬಹುದು ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ವಿರಾಟ್ ಕೊಹ್ಲಿ ಚೇಸಿಂಗ್ ಗಾಡ್ ಅಂತ ಫೇಮಸ್ ಆಗಿದ್ರೂ ಕೂಡ ಕ್ರಿಕೆಟ್ ದುನಿಯಾದ ರನ್ ರಾಕ್ಷಸ ಎಂಬುದನ್ನು ಮರೆಯುವಂತಿಲ್ಲ.