ಸ್ಟಾರ್ ರೈಡರ್ ಸಚಿನ್ ಹಾಗೂ ಗುಮಾನ್ ಸಿಂಗ್ ಅವರ ಭರ್ಜರಿ ಆಟದ ನೆರವಿನಿಂದ ಪಾಟ್ನಾ ಪೈರೇಟ್ಸ್ , ಯು ಮುಂಬಾ ತಂಡವನ್ನು ಮಣಿಸಿತು.
ಮಂಗಳವಾರ ನಡೆದ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿಯ ಲೀಗ್ ನ 103ನೇ ಪಂದ್ಯದಲ್ಲಿ ಪಾಟ್ನಾ 47-36 ರಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಗೆದ್ದ ಪೈರೇಟ್ಸ್ 17 ಪಂದ್ಯಗಳಲ್ಲಿ 12 ರಲ್ಲಿ ಜಯ ಸಾಧಿಸಿದ್ದು 65 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಸೋಲು ಕಂಡ ಮುಂಬಾ 48 ಅಂಕಗಳೊಂದಿಗೆ ಆರನೇ ಸ್ಥಾನ ಹೊಂದಿದೆ.
ಪಂದ್ಯದ ಮೊದಲಾವಧಿಯಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಪಾಟ್ನಾ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ದಾಳಿ ಹಾಗೂ ಟ್ಯಾಕಲ್ ನಲ್ಲಿ ಸಮಯೋಚಿತ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ ಪಾಟ್ನಾ ಈ ಅವಧಿಯಲ್ಲಿ 19 ಅಂಕಗಳನ್ನು ಕಲೆ ಹಾಕಿದರೆ, ಮುಂಬಾ 14 ಅಂಕ ಸೇರಿಸಿತು. ಇನ್ನು ಮುಂಬಾ ಈ ಅವಧಿಯಲ್ಲಿ ಎರಡು ಬಾರಿ ಆಲೌಟ್ ಆದರೆ, ಪಾಟ್ನಾ ಒಂದು ಬಾರಿ ಅಂಗಳ ಖಾಲಿ ಮಾಡಿತು.
ಎರಡನೇ ಅವಧಿಯ ಆಟದಲ್ಲಿ ಪುಟಿದೇಳುವ ಸೂಚನೆ ನೀಡಿದ್ದ ಗುಜರಾತ ಆಸೆ ಫಲಿಸಲಿಲ್ಲ. ಪಾಟ್ನಾ ಆರಂಭದಲ್ಲಿ ಕಂಡುಕೊಂಡಿದ್ದ ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ಅಲ್ಲದೆ ಈ ಅವಧಿಯಲ್ಲಿ ಜೈಂಟ್ಸ್ ತಂಡ ಆಲೌಟ್ ಆಯಿತು.
ಒಟ್ಟು 20 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿದ ಸಚಿನ್ 16 ಅಂಕ ಕಲೆ ಹಾಕಿದರು. ಇನ್ನೋರ್ವ ಸ್ಟಾರ್ ರೈಡರ್ ಗುಮನ್ ಸಿಂಗ್ 11 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು.