ಇಲ್ಲಿ ಮುಂದಿನ ವಿರಾಟ್ ಕೊಹ್ಲಿ ಇದ್ದಾರೆ. ಎಬಿಡಿ ವಿಲಿಯರ್ಸ್ ಸ್ಥಾನ ತುಂಬಬಲ್ಲ ಆಟಗಾರ ಕೂಡ ಇದ್ದಾನೆ. ಎಂಎಸ್ ಧೋನಿಯ ಕ್ಯಾಪ್ಟನ್ಸಿ ಕಾಪಿಯೂ ಇಲ್ಲಿದೆ. ಎಡಗೈ ಬೌಲರ್ಗಳಿದ್ದಾರೆ. ಸ್ಪಿನ್ನರ್ಗಳಿದ್ದಾರೆ. ಅಂಡರ್ 19 ವಿಶ್ವಕಪ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಆಟಗಾರರು ಈಗ ಫ್ರಾಂಚೈಸಿಗಳ ನೆಚ್ಚಿನ ಹೀರೋಗಳಾಗಿದ್ದಾರೆ. ಫೆಬ್ರವರಿ 12 ಮತ್ತು 13ರಂದು ನಡೆಯುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅಂಡರ್ 19 ಆಟಗಾರರೇ ಹಾಟ್ ಫೆವರೀಟ್ಗಳು.
ಡೆವಾಲ್ಡ್ ಬ್ರೆವಿಸ್: ಈತನ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣಿದೆ. ಜೂನಿಯರ್ ಎಬಿಡಿ ವಿಲಿಯರ್ಸ್ ಅನ್ನುವ ಖ್ಯಾತಿ ಈತನಿಗಿದೆ. ಮೈದಾನದ 360 ಡಿಗ್ರಿಯಲ್ಲೂ ಬ್ಯಾಟ್ ಬೀಸಬಲ್ಲ ಯುವ ಪ್ರತಿಭೆ. ಅಂಡರ್ 19 ವಿಶ್ವಕಪ್ನ 6 ಪಂದ್ಯಗಳಿಂದ ಈ ಬೇಬಿ ಡಿ ವಿಲಿಯರ್ಸ್ ಗಳಿಸಿದ್ದು ಬರೋಬ್ಬರಿ 506 ರನ್. 20 ಲಕ್ಷ ರೂಪಾಯಿ ಮೂಲ ಬೆಲೆಯ ಈ ಆಟಗಾರ ಭವಿಷ್ಯದ ಸೂಪರ್ ಸ್ಟಾರ್ ಅನ್ನುವುದರಲ್ಲಿ ಎರಡು ಮಾತಿಲ್ಲ.
ರಾಜ್ ಭಾವಾ: ರಾಜ್ ಅಂಗದ್ ಭಾವಾ ಜೂನಿಯರ್ ವಿಶ್ವಕಪ್ನ ಸೂಪರ್ ಆಲ್ರೌಂಡರ್. ಬ್ಯಾಟಿಂಗ್ನಲ್ಲಿ ಸ್ಪೋಟಕ ಆಟ ಹಾಗೂ ಬೌಲಿಂಗ್ನಲ್ಲಿ ಚಮಕ್ ಮಾಡಬಲ್ಲ ಆಟಗಾರ ರಾಜ್ ಭಾವಾ. 20 ಲಕ್ಷ ಮೂಲ ಬೆಲೆ ಹೊಂದಿರುವ ರಾಜ್ ಭಾವಾ ಜೂನಿಯರ್ ವಿಶ್ವಕಪ್ನಲ್ಲಿ 9 ವಿಕೆಟ್ ಹಾಗೂ 252 ರನ್ಗಳಿಸಿದ್ದರು.
ಯಶ್ ಧುಲ್: ಅಂಡರ್ 19 ವಿಶ್ವಕಪ್ನಲ್ಲಿ ಧೋನಿಯ ಕೂಲ್ ಕ್ಯಾಪ್ಟನ್ಸಿಯ ಕಾಪಿ ಹಾಗೂ ವಿರಾಟ್ ಕೊಹ್ಲಿs ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದ ಭಾರತ ತಂಡದ ನಾಯಕ ಯಶ್ ಧುಲ್ ಈಗ ಫ್ರಾಂಚೈಸಿಗಳ ಹಾಟ್ ಫೆವರೀಟ್. ಧುಲ್ ಮೂಲ ಬೆಲೆ 20 ಲಕ್ಷ ರೂಪಾಯಿ. ಫ್ರಾಂಚೈಸಿಗಳು ಧುಲ್ ರನ್ನು ಖರೀದಿಸಿ ಮುಂದಿನ ಕ್ಯಾಪ್ಟನ್ ಎಂದು ಬಿಂಬಿಸುವ ಸಾಧ್ಯತೆ ಹೆಚ್ಚಿದೆ.
ವಿಕ್ಕಿ ಓಸ್ಟ್ವಾಲ್: ಎಡಗೈ ಸ್ಪಿನ್ನರ್ ವಿಕ್ಕಿ ಓಸ್ಟ್ವಾಲ್ ಅಂಡರ್ 19 ವಿಶ್ವಕಪ್ನ ಎಕಾನಮಿಕ್ ಬೌಲರ್. 20 ಲಕ್ಷ ಮೂಲ ಬೆಲೆ ಹೊಂದಿರುವ ಅಂಡರ್ 19 ಆಟಗಾರ ಈಗ ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆ ಆಟಗಾರನಾಗುವ ಸಾಧ್ಯತೆ ಇದೆ.
ಹರ್ನೂರ್ ಸಿಂಗ್: ಎಡಗೈ ಬ್ಯಾಟ್ಸ್ಮನ್ ಹರ್ನೂರ್ ಸಿಂಗ್ ಜೂನಿಯರ್ ವಿಶ್ವಕಪ್ನಲ್ಲಿ ಮಿಂಚಿಲಿಲ್ಲ. ಆದರೆ ಸ್ಪೋಟಕ ಆಟ ಆಡುವ ಸಾಮರ್ಥ್ಯ ಈ ಸ್ಟೈಲಿಷ್ ಬ್ಯಾಟ್ಸ್ಮನ್ಗಿದೆ. 20 ಲಕ್ಷ ಮೂಲ ಬೆಲೆಯ ಈ ಬ್ಯಾಟ್ಸ್ಮನ್ ಫ್ರಾಂಚೈಸಿಗಳ ಪಾಲಿಗೆ ಅದ್ಭುತ ಪಿಕ್ ಆದರೂ ಆಗಬಹುದು.