ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕಡೆ ಟೀಮ್ ಇಂಡಿಯಾ ಗಮನ ಕೊಟ್ಟಿದೆ. ಅಕ್ಟೋಬರ್ನಲ್ಲಿ ನಡೆಯುವ ಈ ಟೂರ್ನಿಗೆ ಟೀಮ್ ಇಂಡಿಯಾ ಐಪಿಎಲ್ ಮೂಲಕ ತಯಾರಿ ಆರಂಭಿಸಿತ್ತು. ಕೋಚ್ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಆಯ್ಕೆಗಾರರ ಗಮನ ಸೆಳೆಯಲು ಐಪಿಎಲ್ ಆಟಗಾರರಿಗೆ ವೇದಿಕೆ ಆಗಿತ್ತು.
ಟೀಮ್ ಇಂಡಿಯಾದಲ್ಲಿದ್ದರೂ ಖಾಯಂ ಸ್ಥಾನಕ್ಕಾಗಿ ಪರದಾಡುತ್ತಿದ್ದ ಹಲವು ಯುವ ಆಟಗಾರರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದರು. ಬಿಸಿಸಿಐ ಕೂಡ ಅವರ ಮೇಲೆ ಕಣ್ಣಿಟ್ಟಿತ್ತು. ಆದರೆ ಆಟಗಾರರು ಅಂದುಕೊಂಡಿದ್ದು ನಡೆದಿಲ್ಲ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಅಲ್ಲಾಡುತ್ತಿದೆ.
ಇಶಾನ್ ಕಿಶನ್: ಪಂದ್ಯ: 09, ರನ್: 225, ಸರಾಸರಿ: 28
ಐಪಿಎಲ್ ಆಟಗಾರರ ಹರಾಜಿನಲ್ಲಿ ಇಶನ್ ಕಿಶನ್ ದುಬಾರಿ ಆಟಗಾರನಾಗಿದ್ದರು. 15.25 ಕೋಟಿ ಜೇಬಿಗಿಳಿಸಿಕೊಂಡಿದ್ದ ಇಶನ್ ಕಿಶಾನ್ ಈ ಬಾರಿಯ ಐಪಿಎಲ್ನಲ್ಲಿ ಎಡವಿದ್ದಾರೆ. ಆರಂಭದಲ್ಲಿ ಸತತ ಎರಡು ಶತಕ ದಾಖಲಿಸಿ ಮಿಂಚಿದ್ದ ಇಶನ್ ಕಿಶನ್ ನಂತರ ಅಟ್ಟರ್ ಫ್ಲಾಫ್ ಆಗಿದ್ದಾರೆ. ಇಶಾನ್, 9 ಮ್ಯಾಚ್ನಲ್ಲಿ 28ರ ಸರಾಸರಿಯಲ್ಲಿ 225 ರನ್ ಗಳಿಸಿದ್ದಾರೆ. ಟೀಮ್ ಇಂಡಿಯಾದ ಕದ ಬಡಿಯುತ್ತಿರುವ ಇನ್ನೊಬ್ಬ ಕೀಪರ್ ಸಂಜು ಸ್ಯಾಮ್ಸನ್ 10 ಪಂದ್ಯಗಳಲ್ಲಿ 298 ರನ್ ಗಳಿಸಿದ್ದಾರೆ. ಕೆ.ಎಲ್. ರಾಹುಲ್ ಕೂಡ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಬಲ್ಲರು. ಈ ಲೆಕ್ಕಾಚಾರ ಇಶನ್ ಕಿಶನ್ಗೆ ವಿಶ್ವಕಪ್ ಸ್ಥಾನ ಕಷ್ಟ ಎಂದು ಸಾಭೀತು ಮಾಡುತ್ತಿದೆ.
ರುತುರಾಜ್ ಗಾಯಕ್ವಾಡ್: ಪಂದ್ಯ: 10, ರನ್: 264
2021ರ ಐಪಿಎಲ್ ಸೀಸನ್ನಲ್ಲಿ ಆರೇಂಜ್ ಕ್ಯಾಪ್ ಗೆದ್ದಿದ್ದ ರುತುರಾಜ್ ಗಾಯಾಕ್ವಾಡ್ ಈ ಬಾರಿ ಫೇಲ್ ಆಗಿದ್ದಾರೆ. 10 ಪಂದ್ಯಗಳಿಂದ ಹೊಡೆದಿರುವುದು 264 ರನ್. ಶಿಖರ್ ಧವನ್ ಮತ್ತೊಂದು ಕಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ವಿಶ್ವಕಪ್ ನಲ್ಲಿ ಇನ್ನಿಂಗ್ಸ್ ಆರಂಭಿಸಬಹುದು. ಶಿಖರ್ ರಿಸರ್ವ್ ಓಪನರ್ ಆಗಿ ಸ್ಥಾನ ಪಡೆಯಬಹುದು. ಹೀಗಾಗಿ ರುತುರಾಜ್ ಅವಕಾಶ ಕಳೆದುಕೊಳ್ಳಬಹುದು.
ಭುವನೇಶ್ವರ್ ಕುಮಾರ್: ಪಂದ್ಯ: 09, ವಿಕೆಟ್: 09
ಸನ್ ರೈಸರ್ಸ್ ಪರ ಆಡುತ್ತಿರುವ ಭುವಿ, 9 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್ನಲ್ಲಿ ಬೆಂಚ್ ಕಾಯ್ದಿದ್ದ ಭುವನೇಶ್ವರ್, ಈ ಸಲದ ವರ್ಲ್ಡ್ಕಪ್ಗೆ ಆಯ್ಕೆಯಾಗೋದೇ ಡೌಟ್. ಆಸ್ಟ್ರೇಲಿಯಾದ ಪಿಚ್ ಗಳು ವೇಗದ ಬೌಲಿಂಗ್ ಗೆ ಹೆಚ್ಚು ಸೂಟ್ ಆಗುತ್ತವೆ. ಹೀಗಾಗಿ ಸ್ವಿಂಗ್ ಬೌಲರ್ ಆಗಿರುವ ಭುವಿ ತಂಡಕ್ಕೆ ಆಯ್ಕೆಯಾಗುವುದು ಕೂಡ ಡೌಟ್. ಅಷ್ಟೇ ಅಲ್ಲ ಉಮ್ರನ್ ಮಲಿಕ್, ನಟರಾಜನ್ ಮತ್ತು ಖಲೀಲ್ ಅಹ್ಮದ್ ಉತ್ತಮ ಆಟ ಪ್ರದರ್ಶಿಸಿರುವುದು ಭುವಿಗೆ ಮುಳ್ಳಾಗಬಹುದು.
ವೆಂಕಟೇಶ್ ಅಯ್ಯರ್: ಪಂದ್ಯ: 09, ರನ್: 132, ವಿಕೆಟ್: 00
ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾದ ಮಧ್ಯಮ ವೇಗದ ಬೌಲರ್ ಕಂ ಬ್ಯಾಟಿಂಗ್ ಸ್ಥಾನವನ್ನು ತುಂಬಿದ್ದರು. ಆದರೆ ಈ ಬಾರಿ ಐಪಿಎಲ್ ನಲ್ಲಿ ವೆಂಕಟೇಶ್ ಅಯ್ಯರ್ ಕಂಪ್ಲೀಟ್ ಫೇಲ್ ಆಗಿದ್ದಾರೆ. ವೆಂಕಟೇಶ್ 9 ಪಂದ್ಯಗಳನ್ನಾಡಿದ್ದು, 132 ರನ್ ಹೊಡೆದಿದ್ದಾರೆ ಅಷ್ಟೆ. ಬೌಲಿಂಗ್ನಲ್ಲಿ ವಿಕೆಟ್ ಪಡೆದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಾರ್ದಿಕ್ ಪಾಂಡ್ಯಾ ಫಾರ್ಮ್ ಗೆ ಬಂದಿರುವುದು ವೆಂಕಟೇಶ್ ಅಯ್ಯರ್ ಗೆ ದುಬಾರಿಯಾಗಿದೆ.

ಶಾರ್ದೂಲ್ ಠಾಕೂರ್: ಪಂದ್ಯ: 09, ವಿಕೆಟ್: 07
ಶಾರ್ದೂಲ್ ಥಾಕೂರ್ ಡೆತ್ ಓವರ್ ಸ್ಪೆಷಲಿಸ್ಟ್ ಅಂತ ಖ್ಯಾತಿ ಪಡೆದಿದ್ದರು. ಆದರೆ ಈ ಬಾರಿಯ ಐಪಿಎಲ್ ನಲ್ಲಿ ಶಾರ್ದೂಲ್ ದುಬಾರಿ ಬೌಲರ್ ಆಗದ್ದಾರೆ. ವಿಕೆಟ್ ಪಡೆದಿಲ್ಲ ಜೊತೆಗೆ 10ರ ಸರಾಸರಿಯಲ್ಲಿ ರನ್ ಕೊಟ್ಟಿದ್ದಾರೆ. ಇದು ಶಾರ್ಧೂಲ್ ರನ್ನು ತಂಡದಿಂದ ಹೊರಗಡೆ ಇಡಬಹುದು ಎಂದು ಹೇಳಲಾಗುತ್ತಿದೆ.