ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಆಟಗಳಲ್ಲಿ ರೋಲರ್ ಸ್ಕೇಟಿಂಗ್ ಮೊದಲ ಬಾರಿಗೆ ಡೆಮೊ ಕ್ರೀಡೆಯ ಭಾಗವಾಗಿತ್ತು ಎಂಬುದು ಬಹಳ ಹೆಮ್ಮೆ ಮತ್ತು ಪ್ರಾಮುಖ್ಯತೆಯ ವಿಷಯವಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು, ಕ್ರೀಡಾ ಸಚಿವ ಶ್ರೀ.ನಾರಾಯಣಗೌಡ, ಜೈನ್ ವಿಶ್ವವಿದ್ಯಾನಿಲಯದ ಕುಲಪತಿ ಶ್ರೀ.ಚೆನ್ನರಾಜ್ ಜೈನ್, ಯುವಜನ ಸೇವಾ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ.ಶಾಲಿನಿ ರಜನೀಶ್ ಮತ್ತು ಕೆಆರ್‌ಎಸ್ಎ ಪ್ರಧಾನ ಕಾರ್ಯದರ್ಶಿ ಶ್ರೀ ಇಂದೂಧರ್ ಭಾಗವಹಿಸಿದ್ದರು.

ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಆಟಗಳಲ್ಲಿ ಇದು ಸ್ಕೇಟಿಂಗ್‌ನ ಮೊದಲ ಪ್ರಯತ್ನ. ಮತ್ತು ಮುಂದಿನ KIUG ನಿಂದ ಇದನ್ನು ಮುನ್ನೆಲೆ ಕ್ರೀಡೆಯನ್ನಾಗಿ ಮಾಡಲು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸ್ಲಾಲೋಮ್, ಸ್ಪೀಡ್ ಮತ್ತು ಸ್ಕೇಟ್‌ಬೋರ್ಡಿಂಗ್‌ನಂತಹ ಎಲ್ಲಾ ವಿಭಾಗಗಳ ಸ್ಕೇಟರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಮುಂದಿನ ವರ್ಷದಿಂದ ಸ್ಕೇಟಿಂಗ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಕ್ರೀಡಾಪಟುಗಳಿದ್ದಾರೆ.