ಇಂಡಿಯನ್ ಪ್ರೀಮಿಯ್ ಲೀಗ್ನಲ್ಲಿ ಪ್ಲೇ-ಆಫ್ ಲೆಕ್ಕಾಚಾರ ಶುರುವಾಗಿದೆ. ಪರ್ಪಲ್ ಕ್ಯಾಪ್, ಆರೇಂಜ್ ಕ್ಯಾಪ್ ಯಾರು ಪಡೆಯಬಹುದು ಅನ್ನುವ ಲೆಕ್ಕಾಚಾರವೂ ಇದೆ. ಇದೆಲ್ಲದರ ನಡುವೆ ಮತ್ತೊಂದು ಲೆಕ್ಕವೂ ಸದ್ದಿಲ್ಲದೆ ನಡೆಯುತ್ತಿದೆ. ಐಪಿಎಲ್ 15ನೇ ಸೀಸನ್‌ನಲ್ಲಿ 1000 ಸಿಕ್ಸರ್ಗಳು ದಾಖಲಾಗುತ್ತಾ ಅನ್ನುವ ಲೆಕ್ಕವೂ ಜೋರಾಗಿದೆ.
ಐಪಿಎಲ್‌ನಲ್ಲಿ ಇಲ್ಲಿ ತನಕ ನಡೆದ 47 ಪಂದ್ಯಗಳಲ್ಲಿ ಒಟ್ಟು 681 ಸಿಕ್ಸರ್ಗಳು ಸಿಡಿದಿವೆ. ಅಂದರೆ ಪ್ರತೀ ಪಂದ್ಯದಲ್ಲೂ ಸರಾಸರಿ 14.48 ಸಿಕ್ಸರ್ ಗಳು ಸಿಡಿದಿವೆ ಅನ್ನುವ ಲೆಕ್ಕವಿದೆ. ಐಪಿಎಲ್‌ನಲ್ಲಿ ಇನ್ನು 23 ಲೀಗ್ ಪಂದ್ಯ, 2 ಕ್ವಾಲಿಫೈಯರ್, 1 ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳಿವೆ. ಉಳಿದ 27 ಪಂದ್ಯಗಳಲ್ಲಿ ಎಷ್ಟು ಸಿಕ್ಸರ್ ಸಿಡಿಯುತ್ತವೆ ಅನ್ನುವ ಲೆಕ್ಕಾಚಾರವೂ ಜೋರಾಗಿ ನಡೆಯುತ್ತಿದೆ.

ಆದರೆ 1000 ಸಿಕ್ಸರ್ ಗಳು ಟೂರ್ನಿಯಲ್ಲಿ ಸಿಡಿಯಬೇಕಾದರೆ ಪಿಚ್ ಗಳು ಸಹಕಾರ ನೀಡಬೇಕು. ಇತ್ತೀಚಿನ ಪಂದ್ಯಗಳ ವೇಳೆ ಪಿಚ್ ನಿಧಾನವಾಗಿಯೂ. ಹೀಗಾಗಿ ಸಿಕ್ಸರ್ ಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಆದರೆ ಐಪಿಎಲ್‌ನಲ್ಲಿ ಯಾವುದನ್ನೂ ಕೂಡ ಹೇಳಲು ಸಾಧ್ಯವಿಲ್ಲ. ಯಾಕಂದರೆ ಐಪಿಎಲ್ ಇರುವುದೇ ದಾಖಲೆ ಬರೆಯಲು.