ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪದಕ ಆಸೆ ಚಿಗುರಿಸಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಸೆಮಿಫೈನಲ್ಸ್ ನಲ್ಲಿ ನಿರಾಸೆ ಹೊಂದಿದ್ದಾರೆ.
ಶನಿವಾರ ನಡೆದ ಉಪಾಂತ್ಯದಲ್ಲಿ ಸಿಂಧು 21-17, 21-16 ರಿಂದ ಚೀನಾದ ಯು ಫಿ ವಿರುದ್ಧ 43 ನಿಮಿಷಗಳ ಹೋರಾಟದಲ್ಲಿ ಆಘಾತ ಅನುಭವಿಸಿದರು.
ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಚೀನಾ ಆಟಗಾರ್ತಿ ಸಿಂಧು ಅವರ ಸವಾಲನ್ನು ಮೆಟ್ಟಿನಿಂತರು. ಅಲ್ಲದೆ ಅಂಕಗಳನ್ನು ಕಲೆ ಹಾಕಿದರು. ಆರಂಭದಲ್ಲಿ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದ ಸಿಂಧು, ನಿರಾಸೆ ಅನುಭವಿಸಿದರು. ಮೊದಲಾರ್ಧದಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದ ಚೀನಿ ಆಟಗಾರ್ತಿ ಗೇಮ್ ನಲ್ಲಿ ಜಯ ಸಾಧಿಸಿದರು.
ಎರಡನೇ ಗೇಮ್ ನ ಆರಂಭದಲ್ಲಿ ಅಂಕಗಳಿಸಿ ಅಬ್ಬರಿಸಿದ ಸಿಂಧು ಮುನ್ನಡೆ ಸಾಧಿಸಿದರು. ಆದರೆ ಎರಡನೇ ಅವಧಿಯಲ್ಲಿ ಅಂಕಗಳಿಕೆಯಲ್ಲಿ ಹಿಂದೆ ಬಿದ್ದ ಭಾರತೀಯ ಆಟಗಾರ್ತಿ ಗೇಮ್ ಸೋತರು.