Team India – ರೋಹಿತ್ ಶರ್ಮಾ ಗೆ ಇನ್ನೆಷ್ಟು ದಿನ ರಜೆ ಬೇಕು…?

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇನ್ನೂ ವಿಶ್ರಾಂತಿಯಲ್ಲಿದ್ದಾರೆ. ಐಪಿಎಲ್ ಬಳಿಕ ಸುದೀರ್ಘ ಕಾಲ ವಿಶ್ರಾಂತಿಯಲ್ಲಿರುವ ರೋಹಿತ್ ಶರ್ಮಾ ಅವರ ರಜೆ ಇನ್ನೂ ಕೂಡ ಮುಗಿದಿಲ್ಲ.
ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಬ್ರೇಕ್ ಪಡೆದುಕೊಂಡಿರುವ ರೋಹಿತ್ ಶರ್ಮಾ ತನ್ನ ಕುಟುಂಬದೊಂದಿಗೆ ಮಾಲ್ಡೀವಿಸ್ ಪ್ರವಾಸವನ್ನು ಮುಗಿಸಿಕೊಂಡು ಪಾಪಸ್ ಬಂದಿದ್ದಾರೆ.
ಆದ್ರೆ ರೋಹಿತ್ ಶರ್ಮಾ ಇನ್ನೂ ಕೂಡ ರಜೆ ಮೂಡ್ ನಿಂದ ಹೊರಬಂದಿಲ್ಲ. ಈ ನಡುವೆ, ರೋಹಿತ್ ಶರ್ಮಾ ಮುಂಬೈ ನಿವಾಸದ ಬಳಿ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಕೂಡ ಸೆಳೆದಿದ್ದಾರೆ. ತನ್ನ ಅಭಿಮಾನಿಗಳ ಜೊತೆ ಗಲ್ಲಿ ಕ್ರಿಕೆಟ್ ಆಡಿಕೊಂಡು ಎಂಜಾಯ್ ಮಾಡುವ ದೃಶ್ವಗಳನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲೂ ಶೇರ್ ಮಾಡಿಕೊಂಡಿದ್ದಾರೆ.
ಈ ನಡುವೆ, ರೋಹಿತ್ ಶರ್ಮಾ ಅವರ ಬದ್ಧತೆಯನ್ನು ಕೆಲವರು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಯಾಕಂದ್ರೆ ರೋಹಿತ್ ಶರ್ಮಾ ಜೂನ್ 16ರಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಬೇಕಿತ್ತು. ಆದ್ರೆ ವೈಯಕ್ತಿಕ ಕಾರಣ ನೀಡಿ ರೋಹಿತ್ ಶರ್ಮಾ ಜೂನ್ 20ರಂದು ಇಂಗ್ಲೆಂಡ್ ಗೆ ತೆರಳಲಿದ್ದಾರೆ. Team India – Why Didn’t Rohit sharma Fly To London?
ಈಗಾಗಲೇ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿರುವ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಶುಬ್ಮನ್ ಗಿಲ್, ರವೀಂದ್ರ ಜಡೇಜಾ, ಮಹಮ್ಮದ್ ಸೀರಾಜ್, ಮಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ, ಕೆ.ಎಸ್. ಭರತ್ ಮೊದಲಾದವರು ಇಂಗ್ಲೆಂಡ್ ಗೆ ತೆರಳಿದ್ದಾರೆ.

ಆದ್ರೆ ನಾಯಕ ರೋಹಿತ್ ಶರ್ಮಾ ಈ ತಂಡದ ಜೊತೆ ಹೋಗದೇ ಇರುವುದಕ್ಕೆ ಟ್ವಿಟರ್ ನಲ್ಲಿ ಹಲವು ಮಂದಿ ಟೀಕೆ ಮಾಡಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಅವರ ಕ್ರಿಕೆಟ್ ಮೇಲಿನ ಬದ್ಧತೆಯನ್ನು ಕೂಡ ಪ್ರಶ್ನೆ ಮಾಡಿದ್ದಾರೆ.
ಟೀಮ್ ಇಂಡಿಯಾ ಜುಲೈ 1ರಿಂದ 5ರವರೆಗೆ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಕಳೆದ ವರ್ಷ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದ್ದವು. ಕೊನೆಯ ಪಂದ್ಯ ಕೋವಿಡ್ ಸೋಂಕಿನಿಂದ ರದ್ದುಗೊಂಡಿತ್ತು. ಈ ಪಂದ್ಯವನ್ನು ಈಗ ನಡೆಸಲಾಗುತ್ತಿದೆ. ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ.
ಇನ್ನೊಂದೆಡೆ ರಿಷಬ್ ಪಂತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯನ್ನು ಅಡುತ್ತಿದೆ. ಈಗಾಗಲೇ ಮೂರು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 2-1ರಿಂದ ಮುನ್ನಡೆ ಪಡೆದುಕೊಂಡಿದೆ. ನಾಲ್ಕನೇ ಪಂದ್ಯ ಜೂನ್ 18 ಮತ್ತು ಐದನೇ ಪಂದ್ಯ ಜೂನ್ 19ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈ ಸರಣಿಯ ನಂತರ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಜೂನ್ 20ರಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ ಫಸ್ಟ್ ಬ್ಯಾಚ್ ತಂಡದೊಂದಿಗೆ ಹೋಗದೇ ಇರುವುದಕ್ಕೆ ಸಾಕಷ್ಟು ಭಿನ್ನಾ ಮಾತುಗಳು ಕೇಳಿಬರುತ್ತಿವೆ.