Team India – ರಾಹುಲ್ ದ್ರಾವಿಡ್ ಕಾರ್ಯ ವೈಖರಿಗೆ ರವಿಶಾಸ್ತ್ರಿ ಫಿಧಾ..!

ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆ ಸಿಕ್ಕಿರುವುದು ನನಗೆ ಅನೀರಿಕ್ಷಿತ. ಅದು ಕೂಡ ತಪ್ಪಾಗಿ ನನಗೆ ಸಿಕ್ಕಿರುವ ಹುದ್ದೆ. ಆದ್ರೆ ಇದೀಗ ನನ್ನ ಉತ್ತರಾಧಿಕಾರಿಯಾಗಿ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿರುವಾಗ ರವಿ ಶಾಸ್ತ್ರಿ ಈ ರೀತಿಯಾಗಿ ಹೇಳಿದ್ದಾರೆ.
https://twitter.com/i/status/1543275131182653441
ನನ್ನ ಅವಧಿ ಮುಗಿದ ನಂತರ ಟೀಮ್ ಇಂಡಿಯಾದ ಹೆಡ್ ಕೋಚ್ ಹುದ್ದೆಯನ್ನು ನಿಭಾಯಿಸಲು ರಾಹುಲ್ ದ್ರಾವಿಡ್‍ಗಿಂತ ಉತ್ತಮ ಕೋಚ್ ಮತ್ತೊಬ್ಬ ಸಿಗಲ್ಲ. ರಾಹುಲ್ ದ್ರಾವಿಡ್ ಹಂತ ಹಂತವಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾರೆ. ಆದ್ರೆ ನಾನು ಹಾಗಲ್ಲ. ವೀಕ್ಷಕ ವಿವರಣೆ ಮಾಡುತ್ತಿದ್ದ ನನಗೆ ಅನಿರೀಕ್ಷಿತ ಮತ್ತು ತಪ್ಪಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗುವ ಅವಕಾಶ ಸಿಕ್ಕಿತ್ತು. ನಾನು ನನ್ನ ಕೆಲಸವನ್ನು ಮಾಡಿದ್ದೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. Team India -Ravi Shastri hails head coach Rahul Dravid
ಆದ್ರೆ ದ್ರಾವಿಡ್ ಹಾಗಲ್ಲ. ಭಾರತ 19 ವಯೋಮಿತಿ ಕ್ರಿಕೆಟ್ ತಂಡದ ಕೋಚ್ ಆಗಿದ್ದರು. ಆ ನಂತರ ಟೀಮ್ ಇಂಡಿಯಾದ ಕೋಚ್ ಆಗಿದ್ದಾರೆ. ವ್ಯವಸ್ಥೆಯ ಹಂತ ಹಂತವಾಗಿ ಅವರು ಕೋಚ್ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ತನ್ನ ಜವಾಬ್ದಾರಿಯನ್ನು ಚೆನ್ನಾಗಿಯೇ ಆನಂದಿಸುತ್ತಿದ್ದಾರೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನದ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಿಸುವ ವರದಿಗಳ ಬಗ್ಗೆ ನಾನು ಹೆಚ್ಚು ಚಿಂತಿಸುತ್ತೇನೆ ಎಂಬುದನ್ನು ಹೇಳಲು ರವಿಶಾಸ್ತ್ರಿ ಮರೆಯಲಿಲ್ಲ. ಹುಡುಗರು ಚೆನ್ನಾಗಿ ಆಡಿದಾಗ ಮಾಧ್ಯಮಗಳ ವರದಿಗಳು ಉತ್ತಮವಾಗಿರುತ್ತವೆ. ಅದೇ ರೀತಿ ಕೆಟ್ಟ ಪ್ರದರ್ಶನ ನೀಡಿದಾಗ ಅವರು ಮನಸ್ಸಿಗೆ ಬಂದಂತೆ ವರದಿ ಮಾಡುತ್ತಾರೆ ಎಂಬ ದಾಟಿಯಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.
ಇದೀಗ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಈ ಪಂದ್ಯವನ್ನು ಗೆದ್ದುಕೊಂಡು ಸರಣಿಯಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಳ್ಳಬೇಕಿದೆ. ಇನ್ನೊಂದು ವಿಶೇಷತೆ ಅಂದ್ರೆ 2007ರಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದುಕೊಂಡಿತ್ತು. ಇದೀಗ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾರೆ. 2021ರಲ್ಲಿ ನಡೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 2-1ರಿಂದ ಮುನ್ನಡೆ ಪಡೆದುಕೊಂಡಿರುವ ಟೀಮ್ ಇಂಡಿಯಾ ಇದೀಗ ಅಂತರವನ್ನು 3-1ಕ್ಕೇರಿಸಿಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.