Ravindra jadeja – ಏನಾಗಿದೆಯೋ ಆಗಿದೆ ಅಷ್ಟೇ.. ಐಪಿಎಲ್ ನನ್ನ ತಲೆಯಲ್ಲಿಲ್ಲ – ರವೀಂದ್ರ ಜಡೇಜಾ
ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಆಕರ್ಷಕ ಶತಕ ಸಿಡಿಸಿದ್ದಾರೆ. ಅಲ್ಲದೆ ರಿಷಬ್ ಪಂತ್ ಜೊತೆ ಸೇರಿ ದಾಖಲೆಯ 222 ರನ್ ಗಳನ್ನು ಕಲೆ ಹಾಕಿ ಟೀಮ್ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.
ಇನ್ನೊಂದೆಡೆ ಈ ಶತಕದ ಮೂಲಕ ಟೀಕೆ ಮಾಡಿದವರಿಗೆ ರವೀಂದ್ರ ಜಡೇಜಾ ದಿಟ್ಟ ಉತ್ತರವನ್ನು ನೀಡಿದ್ದಾರೆ.
ಈ ಹಿಂದೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿದ್ದ ರವೀಂದ್ರ ಜಡೇಜಾ ನೀರಸ ಪ್ರದರ್ಶನ ನೀಡಿದ್ದರು. ಅಲ್ಲದೆ ಸಾಕಷ್ಟು ಟೀಕೆಗಳನ್ನು ಕೇಳಿಕೊಳ್ಳಬೇಕಾಯ್ತು. ನಾಯಕತ್ವದ ಒತ್ತಡದಿಂದಾಗಿ ತನ್ನ ವೈಯಕ್ತಿಕ ಆಟಕ್ಕೂ ದಕ್ಕೆಯಾಗಿತ್ತು. ಹೀಗಾಗಿ ನಾಯಕತ್ವವನ್ನು ತ್ಯಜಿಸಿದ್ದರು.
ಇದೀಗ ಐಪಿಎಲ್ ಕೆಟ್ಟ ಪ್ರದರ್ಶನ ದಿಂದ ಆಲ್ ರೌಂಡರ್ ರವೀಂದ್ರ ಜಡೇಜಾ ಹೊರಬಂದಿದ್ದಾರೆ. ಬ್ಯಾಟಿಂಗ್ ಲಯವನ್ನು ಕಂಡುಕೊಂಡಿರುವ ಜಡೇಜಾ ಇನ್ನು ಬೌಲಿಂಗ್ ನಲ್ಲೂ ಜಾದು ಮಾಡ್ತಾರೋ ಅನ್ನೋದನ್ನು ಕಾದು ನೋಡಬೇಕು.
ಶತಕದ ಬಳಿಕ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಜಡೇಜಾ, ಇಲ್ಲಿಯವರೆಗೆ ಏನಾಗಿದೆಯೋ ಅದು ಆಗಿದೆ. ಹಾಗಂತ ಈಗ ಐಪಿಎಲ್ ನನ್ನ ತಲೆಯಲ್ಲಿಲ್ಲ ಎಂದು ಹೇಳಿದ್ದಾರೆ. Ravindra jadeja – What happened, happened – IPL was not on my mind: Ravindra Jadeja
ಟೀಮ್ ಇಂಡಿಯಾದ ಪರ ಆಡುವಾಗ ನಿಮ್ಮ ಫೋಕಸ್ ತಂಡದ ಮೇಲಿರುತ್ತದೆ. ಹಾಗೇ ನನಗೆ ಕೂಡ. ಟೀಮ್ ಇಂಡಿಯಾದ ಪರ ಉತ್ತಮ ಪ್ರದರ್ಶನ ನೀಡುವುದರ ಖುಷಿ ಬೇರೆ ಎಲ್ಲೂ ಸಿಗಲ್ಲ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ.
ಇನ್ನು ಇಂಗ್ಲೆಂಡ್ ನೆಲದಲ್ಲಿ ಶತಕ ದಾಖಲಿಸಿರುವುದು ಹೆಮ್ಮೆಯ ಸಂಗತಿ. ಈ ಶತಕದಿಂದ ನನ್ನ ಆತ್ಮವಿಶ್ವಾಸವೂ ಇಮ್ಮಡಿಗೊಂಡಿದೆ. ಅದರಲ್ಲೂ ಸ್ವಿಂಗ್ ಎಸೆತಗಳ ಎದುರು ಈ ಸಾಧನೆ ಮಾಡಿರೋದು ಖುಷಿಯಾಗುತ್ತಿದೆ ಅಂದಿದ್ದಾರೆ ರವೀಂದ್ರ ಜಡೇಜಾ.
ಒಟ್ಟಿನಲ್ಲಿ ರವೀಂದ್ರ ಜಡೇಜಾ ಕಮ್ ಬ್ಯಾಕ್ ಮಾಡಿರೋದು ಒಳ್ಳೆಯ ಬೆಳವಣಿಗೆ. ಐಪಿಎಲ್ ನ ಕೆಟ್ಟ ಪ್ರದರ್ಶನ ಮತ್ತು ಕೆಲವೊಂದು ಕಹಿ ಘಟನೆಗಳಿಂದ ಹೊರಬಂದು ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.