Team india – ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾ ಸೇರಿಕೊಂಡ ಆರ್. ಅಶ್ವಿನ್..!

ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಅವರು ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಅಲ್ಲದೆ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿರುವ ಆರ್. ಅಶ್ವಿನ್ ಅವರು ಟೀಮ್ ಇಂಡಿಯಾವನ್ನು ಕೂಡ ಸೇರಿಕೊಂಡಿದ್ದಾರೆ.
ಆರ್. ಅಶ್ವಿನ್ ಟೀಮ್ ಇಂಡಿಯಾವನ್ನು ಸೇರಿಕೊಂಡಿರುವುದರಿಂದ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದ್ರೆ ಸದ್ಯ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಆಡುತ್ತಾರೋ ಇಲ್ವೋ ಅನ್ನೋದು ಗೊತ್ತಾಗಿಲ್ಲ. ಯಾಕಂದ್ರೆ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ 11ರ ಬಳಗವನ್ನು ಆಯ್ಕೆ ಮಾಡಿಲ್ಲ. ತಂಡದ ಎಲ್ಲಾ ಆಟಗಾರರು ಕೂಡ ಅಭ್ಯಾಸ ಪಂದ್ಯದಲ್ಲಿ ಆಡಬಹುದಾಗಿದೆ. Team india – R Ashwin joins Team India before practice match

ಇನ್ನು ಆರ್. ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ 11ರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ ಅನ್ನೋದು ಕೂಡ ದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ ಟೀಮ್ ಇಂಡಿಯಾ ನಾಲ್ಕು ವೇಗಿಗಳು ಮತ್ತು ಏಕೈಕ ಸ್ಪಿನ್ನರ್ ಅನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ರವೀಂದ್ರ ಜಡೇಜಾ ತಂಡದಲ್ಲಿರುವುದರಿಂದ ಅಶ್ವಿನ್ ಅವರಿಗೆ ಸ್ಥಾನ ಸಿಗೋದು ಕೂಡ ಡೌಟ್ ಆಗಿದೆ.
ಇನ್ನೊಂದೆಡೆ ಕಳೆದ ಬಾರಿಯ ನಾಲ್ಕು ಟೆಸ್ಟ್ ಪಂದ್ಯಗಳಲ್ಲೂ ಆರ್. ಅಶ್ವಿನ್ 11ರ ಬಳಗದಲ್ಲಿ ಕಾಣಿಸಿಕೊಂಡಿಲ್ಲ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಜುಲೈ 1ರಿಂದ ಆರಂಭವಾಗಲಿದೆ. ಆ ನಂತರ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿ ನಡೆಯಲಿದೆ.