ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ತಯಾರಿಗಳು ಜೋರಾಗಿ ನಡೆಯುತ್ತಿದೆ. ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾವನ್ನು ಮಣಿಸಲು ಇಂಗ್ಲೆಂಡ್ ಪ್ಲಾನ್ ಮಾಡಿದ್ದರೆ, ಇಂಗ್ಲೆಂಡ್ ಟೀಮ್ ಇಂಡಿಯಾವನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಎರಡೂ ತಂಡಗಳು ರಣತಂತ್ರಗಳು ಕುತೂಹಲ ಕೆರಳಿಸಿದೆ.
ಜುಲೈ 1 ರಿಂದ ಆರಂಭವಾಗುವ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಕಾಂಬಿನೇಷನ್ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವಿದೆ. ಕೋವಿಡ್ ಸೋಂಕಿಗೆ ಒಳಗಾಗಿದ್ದ ಆಫ್ ಸ್ಪಿನ್ನರ್ ಅಶ್ವಿನ್ ಫಿಟ್ ಆಗಿದ್ದಾರೆ. ಆದರೆ ಅಶ್ವಿನ್ಗೆ ಸ್ಥಾನ ಸಿಗುತ್ತಾ ಅನ್ನುವ ಪ್ರಶ್ನೆ ಇದೆ. ಯಾಕಂದರೆ ಟೀಮ್ಇಂಡಿಯಾ ಸ್ಪಿನ್ನಿಂಗ್ ಆಲ್ರೌಂಡರ್ ರೂಪದಲ್ಲಿ ರವೀಂದ್ರ ಜಡೇಜಾಗೆ ಸ್ಥಾನ ನೀಡುವ ಸಾಧ್ಯತೆ ಇದೆ.
ಈ ಮಧ್ಯೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೋವಿಡ್ನಿಂದ ಚೇತರಿಸಿಕೊಳ್ಳುತ್ತಾರಾ ಅನ್ನುವ ಪ್ರಶ್ನೆಇದೆ. ರೋಹಿತ್ ಚೇತರಿಸಿಕೊಂಡರೆ ಶುಭ್ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಹಿಟ್ ಮ್ಯಾನ್ ಫಿಟ್ ಆಗದೇ ಇದ್ದರೆ ಯಾರಿಗೆ ಸ್ಥಾನ ಅನ್ನುವ ಚರ್ಚೆ ಜೋರಾಗಿದೆ. ಸದ್ಯ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಂಡರೂ ಆಡುವುದು ಸಂಶಯ. ಚೇತೇಶ್ವರ ಪೂಜಾರಾ ಓಪನರ್ ಆಗಿ ಕಣಕ್ಕಿಳಿಯಬಹುದು.
ಬೌಲಿಂಗ್ ಕಾಂಬಿನೇಷನ್ ಬಗ್ಗೆಯೂ ಸಾಕಷ್ಟು ಕುತೂಹಲವಿದೆ. ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜಾಗ ಖಚಿತ. 3ನೇ ವೇಗಿ ಯಾರಾಗ್ತಾರೆ ಅನ್ನುವ ಚರ್ಚೆಯೂ ಇದೆ. ಜಡೇಜಾ ಮತ್ತು ಅಶ್ವಿನ್ ಇಬ್ಬರೂ ಆಡ್ತಾರಾ ಅಥವಾ ಒಂದೇ ಸ್ಪಿನ್ ಆಯ್ಕೆಯ ಬಗ್ಗೆ ಟೀಮ್ ಇಂಡಿಯಾ ಯೋಚಿಸುತ್ತಾ ಅನ್ನುವುದು ಕೂಡ ವಿಶ್ಲೇಷಣೆ ನಡೆಯುತ್ತಿದೆ. ಒಟ್ಟಿನಲ್ಲಿ ಎಡ್ಜ್ಬಾಸ್ಟನ್ ಗೆಲ್ಲಲು ಎರಡೂ ತಂಡಗಳ ರಣತಂತ್ರ ಜೋರಾಗಿದೆ.