ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಕಟ್ಟ ಕಡೆಯ ಸ್ಥಾನ ಪಡೆದುಕೊಂಡಿತ್ತು. ಆದರೆ ಮುಂದಿನ ಐಪಿಎಲ್ನಲ್ಲಿ ಹೀಗಾಗಬಾರದು ಅನ್ನುವ ನಿರ್ಧಾರ ಮಾಡಿದೆ. ತನ್ನಅನ್ಕ್ಯಾಪ್ಡ್ ಆಟಗಾರರಿಗೆ ಇಂಗ್ಲೆಂಡ್ನಲ್ಲಿ ಟ್ರೈನಿಂಗ್ ನೀಡಲು ತಯಾರಿ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಭಾರತೀಯ ಆಟಗಾರರಿಗೆ ಈ ಅವಕಾಶ ಸಿಗಲಿದೆ.
ಇಂಗ್ಲೆಂಡ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರರು ಹಲವು ಕೌಂಟಿ ಕ್ಲಬ್ಗಳ ಟಿ20 ಪಂದ್ಯಗಳನ್ನು ಆಡಲಿದ್ದಾರೆ. ಇದು ಯುವ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಲಿದೆ. ಮುಂಬೈ ತಂಡದಲ್ಲಿರುವ ತಿಲಕ್ ವರ್ಮಾ, ಕುಮಾರ್ ಕಾರ್ತಿಕೇಯ, ರಮನ್ ದೀಪ್ ಸಿಂಗ್ ಮತ್ತು ಹೃತಿಕ್ ಶೋಕಿನ್ ಸೇರಿದಂತೆ ಹಲವು ಆಟಗಾರರಿಗೆ ಈ ಅವಕಾಶ ಸಿಗಲಿದೆ.
