team india – ಕನ್ನಡಿಗ ಮಯಾಂಕ್ ಅಗರ್ವಾಲ್ ಮುಂದೆ “ಚಿನ್ನ”ದಂಥ ಚಾನ್ಸ್..!

ಭಾರತ ಟೆಸ್ಟ್ ತಂಡದ ನಂಬಿಕಸ್ಥ ಓಪನರ್ ಮಯಾಂಕ್ ಅಗರ್ವಾಲ್ ಅವರಿಗೆ ಶನಿವಾರ (ಮಾರ್ಚ್ 12) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ತುಂಬಾ ವಿಶೇಷ. ಇದು ತವರು ನೆಲದಲ್ಲಿ ಮಯಾಂಕ್ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯ.
ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದನ್ನು ಬರೆಯುವ ಅವಕಾಶ ಮಯಾಂಕ್ ಅಗರ್ವಾಲ್”ಗೆ ಒದಗಿ ಬಂದಿದೆ. ಆ ದಾಖಲೆಯನ್ನು ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಕೂಡ ಮಾಡಿಲ್ಲ, ಮಯಾಂಕ್ ಅಗರ್ವಾಲ್ ಅವರ ಆಪ್ತಮಿತ್ರ ಕೆ.ಎಲ್ ರಾಹುಲ್ ಕೂಡ ಮಾಡಿಲ್ಲ. ಒಂದು ವೇಳೆ ಮಯಾಂಕ್ ಆ ದಾಖಲೆ ಬರೆದು ಬಿಟ್ಟರೆ, ಕರ್ನಾಟಕದ ಮತ್ತೊಬ್ಬ ಬ್ಯಾಟಿಂಗ್ ದಂತಕಥೆ ಜಿ.ಆರ್ ವಿಶ್ವನಾಥ್ ಸಾಲಿಗೆ ಸೇರ್ಪಡೆಯಾಗಲಿದ್ದಾರೆ. ಹಾಗಾದ್ರೆ ಮಯಾಂಕ್ ಅಗರ್ವಾಲ್’ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಕಿರುವ ಆ ಚಿನ್ನದಂಥ ಅವಕಾಶ ಯಾವುದು..? ಅದೇ ಟೆಸ್ಟ್ ಶತಕ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡಿಗನೊಬ್ಬ ಟೆಸ್ಟ್ ಶತಕ ಬಾರಿಸಿದ್ದು ಬರೋಬ್ಬರಿ 43 ವರ್ಷಗಳ ಹಿಂದೆ. 1979ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಜಿ.ಆರ್ ವಿಶ್ವನಾಥ್ ಅಜೇಯ 161 ರನ್ ಗಳಿಸಿದ್ದರು. ಅದೇ ಕೊನೆ… ಅದಾಗಿ ನಾಲ್ಕು ದಶಕಗಳೇ ಕಳೆದ್ರೂ, ಕರ್ನಾಟಕದ ಯಾವೊಬ್ಬ ಆಟಗಾರನೂ ಚಿನ್ನಸ್ವಾಮಿ ಮೈದಾನದಲ್ಲಿ ಟೆಸ್ಟ್ ಶತಕ ಬಾರಿಸಿಲ್ಲ. ಟೀಮ್ ಇಂಡಿಯಾದ ಹಾಲಿ ಬ್ಯಾಟಿಂಗ್ ಕೋಚ್ ರಾಹುಲ್ ದ್ರಾವಿಡ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 8 ಟೆಸ್ಟ್ ಪಂದ್ಯಗಳನ್ನಾಡಿದ್ರೂ, ಒಮ್ಮೆಯೂ ಶತಕ ಬಾರಿಸಿಲ್ಲ. ಇನ್ನು ಕೆ.ಎಲ್ ರಾಹುಲ್ 2017ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ 90 ರನ್ ಗಳಿಸಿ ಔಟಾಗಿ ಸ್ಮರಣೀಯ ಶತಕವನ್ನು ತಪ್ಪಿಸಿಕೊಂಡಿದ್ದರು. Team india – Mayank Agarwal can’t miss chances
ಇಲ್ಲಿಯವರೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಪರ ಒಟ್ಟು 17 ಟೆಸ್ಟ್ ಶತಕಗಳು ದಾಖಲಾಗಿವೆ. ಜಿ.ಆರ್ ವಿಶ್ವನಾಥ್ 1979ರಲ್ಲಿ
mayank agarwal ipl 2022 punjab kings team india
ಟೆಸ್ಟ್ ಶತಕ ಬಾರಿಸಿದ ನಂತರ ಕರ್ನಾಟಕದ ಒಬ್ಬನೇ ಒಬ್ಬ ಆಟಗಾರನಿಗೆ ಚಿನ್ನಸ್ವಾಮಿಯಲ್ಲಿ ಟೆಸ್ಟ್ ಶತಕ ಒಲಿದಿಲ್ಲ. ಸುನಿಲ್ ಗವಾಸ್ಕರ್, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್ ಮತ್ತು ಮುರಳಿ ವಿಜಯ್ ಬೆಂಗಳೂರಿನಲ್ಲಿ ತಲಾ ಎರಡು ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಇನ್ನು ದಿಲೀಪ್ ವೆಂಗ್ಸರ್ಕರ್, ನವಜೋತ್ ಸಿಂಗ್ ಸಿಧು, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ವಿರಾಟ್ ಕೊಹ್ಲಿ, ಶಿಖರ್ ಧವನ್ ತಲಾ ಒಂದೊಂದು ಶತಕ ಸಿಡಿಸಿದ್ದಾರೆ. ಆದರೆ ಈ ಸಾಲಿನಲ್ಲಿರೋದು ಒಬ್ಬನೇ ಒಬ್ಬ ಕನ್ನಡಿಗ. ಅವರೇ ಗುಂಡಪ್ಪ ವಿಶ್ವನಾಥ್.
ಈಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಶತಕ ಬಾರಿಸುವ ಚಿನ್ನದಂಥ ಅವಕಾಶ ಮಯಾಂಕ್ ಅಗರ್ವಾಲ್ ಮುಂದಿದೆ. ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 33 ರನ್ ಗಳಿಸಿ ಔಟಾಗಿದ್ದ ಮಯಾಂಕ್, ತವರು ಮೈದಾನದಲ್ಲಿ ಟೆಸ್ಟ್ ಶತಕ ಬಾರಿಸಿ ದಾಖಲೆ ಬರೆಯಲಿದ್ದಾರೆ. ಕಾದು ನೋಡೋಣ.
ರ್ನಾಟಕದ ಸ್ಟಾರ್ ಬ್ಯಾಟ್ಸ್”ಮನ್ ಮಯಾಂಕ್ ಅಗರ್ವಾಲ್ ಭಾರತ ಟೆಸ್ಟ್ ತಂಡದ ನಂಬಿಕಸ್ಥ ಓಪನರ್. 31 ವರ್ಷದ ಮಯಾಂಕ್ ಭಾರತ ಪರ 20 ಟೆಸ್ಟ್ ಪಂದ್ಯಗಳನ್ನಾಡಿದ್ದು, ನಾಲ್ಕು ಶತಕಗಳೊಂದಿಗೆ 1462 ರನ್ ಗಳಿಸಿದ್ದಾರೆ.