ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಯಶ್ ಧುಲ್ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಧೂಳೆಬ್ಬಿಸಿದ್ದಾರೆ. ಆಡಿರುವ 6 ಇನ್ನಿಂಗ್ಸ್ಗಳಲ್ಲೇ ಧುಲ್ 2 ಶತಕ ಮತ್ತು 1 ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಈ ಬಾರಿಯ ರಣಜಿ ಟ್ರೋಫಿ ಫೈಟ್ನಿಂದ ದೆಹಲಿ ಹೊರಬಿದ್ದರೂ ಧುಲ್ ಆಟ ಬೆರಗು ಮೂಡಿಸಿದೆ. ಧುಲ್ ಬ್ಯಾಟಿಂಗ್ ಶಕ್ತಿ ಏನು ಅನ್ನುವುದು ಗೊತ್ತಾಗಿದೆ. ಅಚ್ಚರಿ ಅಂದರೆ ಧುಲ್ ಕಿರಿಯರ ವಿಶ್ವಕಪ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ಧುಲ್ ರಣಜಿ ಟ್ರೋಫಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ತಮಿಳು ನಾಡು ವಿರುದ್ಧದ ಮೊದಲ ರಣಜಿ ಪಂದ್ಯದಲ್ಲೇ ಎರಡು ಶತಕಗಳನ್ನು ಸಿಡಿಸಿ ಮಿಂಚಿದ್ದರು. ಪದಾರ್ಪಣಾ ಪಂದ್ಯದಲ್ಲೇ ಎರಡು ಶತಕ ಸಿಡಿಸಿದ್ದ ನಾರಿ ಕಾಂಟ್ರಾಕ್ಟರ್, ಮತ್ತು ವಿರಾಗ್ ಅವಟೆ ಸಾಲಿಗೆ ಯಶ್ ಮೂರನೇಯವರಾಗಿ ಸೇರಿಕೊಂಡಿದ್ದರು. ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಧುಲ್ 113 ರನ್ಗಳಿಸಿದ್ದರು.
ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಯಶ್ ಧುಲ್ ಹೆಚ್ಚಿನ ಯಶಸ್ಸು ಕಾಣಲಿಲ್ಲ. ದೊಡ್ಡ ಮೊತ್ತಗಳಿಸುವಲ್ಲಿ ಧುಲ್ ಎಡವಿದ್ದರು.
ಧುಲ್ ಛತ್ತೀಸ್ಗಢದ ವಿರುದ್ಧ ಮೂರನೇ ಪಂದ್ಯ ಆಡಿದರು. ಮೊದಲ ಇನ್ನಿಂಗ್ಸ್ನಲ್ಲಿ 29 ರನ್ಗಳಿಸಿದ್ದರೂ 2ನೇ ಇನ್ನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿ ಮಿಂಚಿದರು. ಆಡಿದ ಮೊದಲ 6 ರಣಜಿ ಇನ್ನಿಂಗ್ಸ್ನಲ್ಲಿ ಧುಲ್ 2 ಶತಕ ಮತ್ತು 1 ದ್ವಿಶತ ಸಿಡಿಸಿದ ಕೀರ್ತಿ ಹೊಂದಿದ್ದಾರೆ.