ಟಿ20 ವಿಶ್ವಕಪ್‍ನಲ್ಲಿ ಕೋವಿಡ್ ಸೋಂಕಿತ ಆಟಗಾರರೂ ಕೂಡ ಆಡಬಹುದೆಂದು ಐಸಿಸಿ ಹೇಳಿದೆ.
ಕೋವಿಡ್ ಸೋಂಕಿತ ಆಟಗಾರನಿಗೆ ತಂಡದ ವೈದ್ಯ ಅನುಮತಿ ನೀಡಿದರೆ ಮಾತ್ರ ಅವಕಾಶ ನೀಡಲಾಗುವುದೆಂದು ಐಸಿಸಿ ಸ್ಪಷ್ಟನೆ ನೀಡಿದೆ.
ಸೋಂಕಿತ ಅಟಗಾರನಿಗೆ ಆಡಲು ಆಗದಿದ್ದರೆ ಬದಲಿ ಆಟಗಾರನಿಗೆ ಅವಕಾಶ ನೀಡಬಹುದಾಗಿದೆ. ಸೋಂಕಿತನಿಂದಾಗಿ ಪಂದ್ಯದ ವೇಳಾ ಪಟ್ಟಿಗೆ ಯಾವುದು ಅಡ್ಡಿಯಿಲ್ಲ ನಿಗದಿಯಂತೆ ಪಂದ್ಯ ನಡೆಯಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ.
ಇತ್ತೀಚೆಗೆ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದ ವೇಳೆ ಆಸ್ಟ್ರೇಲಿಯಾ ಆಲ್ರೌಂಡರ್ ತಾಹೀಲಾ ಮೆಕ್‍ಗ್ರೆತ್‍ಗೆ ಸೋಂಕು ತಗುಲಿದಾಗ ಐಸಿಸಿ ಆಡಲು ಅವಕಾಶ ನೀಡಿತ್ತು. ಆದರೆ ತಾಹೀಲಾ ಆಡದೇ ಪ್ರತ್ಯೇಕವಾಗಿ ಕೂತಿದ್ದರು.
ಒಂದು ವೇಳೆ ಈಗ ನಡೆಯುತ್ತಿರುವ ವಿಶ್ವಕಪ್‍ನಲ್ಲಿ ಆಟಗಾರನಿಗೆ ಸೋಂಕು ಕಂಡು ಬಂದರೆ ಐಸೋಲೇಷನ್ ಇಲ್ಲ. ಈ ಹಿಂದೆ ಸಹ ಆಟಗಾರರನ್ನು ಐಸೋಲೇಟ್ ಮಾಡಲಾಗುತ್ತಿತ್ತು.
ಈ ಬಾರಿಯ ಟೂರ್ನಿಯಲ್ಲಿ ಯಾವುದೇ ಕೋವಿಡ್ ಟೆಸ್ಟ್ ನಡೆಸಿಲ್ಲ. ಈಗ ಆಟಗಾರರು ಯಾವುದೇ ಸ್ಯಾಂಪಲ್‍ಗಳನ್ನು ಕೊಡುವಂತಿಲ್ಲ. 2020ರಲ್ಲಿ ಸಾಕಷ್ಟು ಆಟಗಾರರ ಸ್ಯಾಂಪಲ್‍ಗಳನ್ನು ತೆಗೆದುಕೊಳ್ಳಲಾಗಿತ್ತು.
ವಿಶ್ವದಲ್ಲಿ ಕೊರೋನಾ ಸೋಂಕು ಕಡಿಮೆಯಾಗಿದ್ದು ಹಿಡಿತಕ್ಕೆ ಬಂದಿದೆ.ಸಾರ್ವಜನಿಕರು ಲಸಿಕೆ ತೆಗೆದುಕೊಂಡು ಸುರಕ್ಷಿತರಾಗಿದ್ದಾರೆ.