ವೇಗಿ ಅಲ್ಜಾರಿ ಜೋಸೆಫ್ ಮಾರಕ ದಾಳಿಯ ನೆರೆವಿನಿಂದ ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ಜಿಂಬಾಬ್ವೆ ವಿರುದ್ಧ 31 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ವೆಸ್ಟ್ಇಂಡೀಸ್ ಸೂಪರ್ 12 ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಹೋಬಾರ್ಟ್ ಮೈದಾನದಲ್ಲಿ ನಡೆದ ಬಿ ಗುಂಪಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಕಲೆ ಹಾಕಿತು. ಜಿಂಬಾಬ್ವೆ 18.2 ಓವರ್ಗಳಲ್ಲಿ 122 ರನ್ ಗಳಿಗೆ ಸರ್ವಪತನ ಕಂಡಿತು.
154 ರನ್ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡಕ್ಕೆ ಅಲ್ಜಾರಿ ಜೋಸೆಫ್ ಹಾಗೂ ಜಾಸನ್ ಹೋಲ್ಡರ್ ವಿಲನ್ ಆದರು. ನಾಯಕ ರೆಗಿಸ್ ಚಕಾಬ್ವಾ (13 ರನ್),ಟೋನಿ ಮುನಿಯೊಂಗಾ (2 ರನ್), ಲೂಕ್ ಜೊಂಗ್ವೆ (29ರನ್), ರಿಚರ್ಡ್ (2ರನ್) ಅವರುಗಳನ್ನು ಬಲಿತೆಗೆಗೆದುಕೊಂಡರು.
ಇನ್ನು ಓಪನರ್ ವೆಸ್ಲಿ ಮಾಧೆವೆರೆ (27 ರನ್), ರಿಯಾನ್ ಬರ್ಲ್ (17 ರನ್), ಚತಾರಾ(3ರನ್) ಅವರುಗಳನ್ನು ಜಾಸನ್ ಹೋಲ್ಡರ್ ಪೆವಿಲಿಯನ್ಗೆ ಅಟ್ಟಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಅಲ್ಜಾರಿ ಜೋಸೆಫ್ 16ಕ್ಕೆ 4 ವಿಕೆಟ್,ಜಾಸನ್ ಹೋಲ್ಡರ್ 12ಕ್ಕೆ 3 ವಿಕಟ್ ಪಡೆದರು.

ಇದಕ್ಕೂ ಮುನ್ನ ವೆಸ್ಟ್ಇಂಡೀಸ್ ಪರ ಜಾನ್ಸನ್ ಚಾರ್ಲ್ಸ್ 45 ರನ್, ರೊವಮನ್ ಪೊವೆಲ್ 28, ಅಖಿಲ್ ಹುಸೇನ್ ಅಜೇಯ 23 ರನ್ ಗಳಿಸಿದರು.
4 ವಿಕೆಟ್ ಪಡೆದ ಅಲ್ಜಾರಿ ಜೋಸೆಫ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.