T20 World Cup ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.
ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾ 5 ರನ್ ಗಳ ರೋಚಕ ಗೆಲುವು ದಾಖಲಿಸಿತು.
ಬಾಂಗ್ಲಾ ವಿರುದ್ಧ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 44 ಎಸೆತದಲ್ಲಿ 8 ಬೌಂಡರಿ 1 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಗಳಿಸಿದರು. ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಭಾರತ 184 ರನ್ ಗಳಿಸಲು ಸಾಧ್ಯವಾಯಿತು.
ವಿರಾಟ್ ಕೊಹ್ಲಿ ಈ ಅದ್ಭುತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.ಮಾಜಿ ಆಟಗಾರ ಜಯವರ್ಧನೆ ಟಿ20 ವಿಶ್ವಕಪ್ನಲ್ಲಿ 31 ಪಂದ್ಯಗಳಿಂದ 1016 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ 2012ರ ಟಿ20 ವಿಶ್ವಕಪ್ನಿಂದ ಆಡುತ್ತಾ ಬಂದಿದ್ದು 25 ಪಂದ್ಯಗಳನ್ನಾಡಿದ್ದು 13 ಅರ್ಧ ಶತಕ, 11 ಬಾರಿ ಅಜೇಯರಾಗಿ ಉಳಿದಿದ್ದಾರೆ.
ಮೂರನೆ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ 965 ರನ್ ಗಳೊಂದಿಗೆ ಮೂರನೆ ಸ್ಥಾನ ಹಾಗೂ ನಾಯಕ ರೋಹಿತ್ ಶರ್ಮಾ 921 ರನ್ಗಳೊಂದಿಗೆ ನಾಲ್ಕನೆ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ https://sportskarnataka.com/t20-world-cup-in…-win-over-bangla/