Team India ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 5 ರನ್ ಗೆಲುವು ಸಾಧಿಸಿದೆ. DLS ನಿಯಮದ ಪ್ರಕಾರ 16 ಓವರ್‌ಗಳಲ್ಲಿ 151 ರನ್ ಗುರಿ ಬೆನ್ನತ್ತಿದ್ದ ಎದುರಾಳಿ ತಂಡ, 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾಯಿತು. ಮಳೆ ಆರಂಭಕ್ಕೂ ಮುನ್ನ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿ, ಗೆಲುವಿನ ಹಾದಿಯಲ್ಲಿ ಸಾಗಿತ್ತು. ಆದರೆ, ಮಳೆ ನಿಂತ ನಂತರ ಬಾಂಗ್ಲಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಈ ಗೆಲುವಿನೊಂದಿಗೆ ಭಾರತದ ಸೆಮೀಸ್ ಹಾದಿ ಸುಲಭವಾಗಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಲವು ದಾಖಲೆಗಳನ್ನು ಬರೆದಿದೆ. ಬಾಂಗ್ಲಾ ಹುಲಿಗಳನ್ನು ಬಿಲ ಸೇರಿಸಿದ ಭಾರತ, ಟಿ20 ವಿಶ್ವಕಪ್‌ನಲ್ಲಿ 26ನೇ ಜಯ ಸಾಧಿಸಿದೆ. ಅಲ್ಲದೆ, ವಿಶ್ವಕಪ್‌ನಲ್ಲಿ ಅತಿ ಕಡಿಮೆ ಪಂದ್ಯಗಳನ್ನು ಆಡಿ, ಹೆಚ್ಚು ಗೆಲುವು ದಾಖಲಿಸಿದ ವಿಷಯದಲ್ಲಿ ಭಾರತ ಎರಡನೇ ಸ್ಥಾನಕ್ಕೇರಿದೆ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಇದುವರೆಗೆ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿತ್ತು. ಶ್ರೀಲಂಕಾ 31 ಪಂದ್ಯಗಳಲ್ಲಿ ಜಯಿಸಿದ್ದರೆ, ಭಾರತ 26 ಮತ್ತು ಪಾಕಿಸ್ತಾನ 25 ಪಂದ್ಯಗಳನ್ನು ಗೆದ್ದಿವೆ.
ಈ ಗೆಲುವೊಂದಿಗೆ ಭಾರತ ಹೊಸ ದಾಖಲೆ ಬರೆದಿದೆ. ಕ್ಯಾಲೆಂಡರ್ ವರ್ಷದಲ್ಲಿ ಭಾರತ 20ನೇ ಟಿ20 ಅಂತಾರಾಷ್ಟ್ರೀಯ ಗೆಲುವು ಸಾಧಿಸಿದೆ. ಈ ಸಾಧನೆ ಮಾಡಿದ ಭಾರತದ ಮೊದಲ ಎನ್ನುವ ಕೀರ್ತಿಗೆ ರೋಹಿತ್ ಪಾತ್ರರಾಗಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಗೆಲುವುಗಳನ್ನು ಗಳಿಸಿದ ನಾಯಕರ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ https://sportskarnataka.com/t20-world-cup-vi…er-t20-world-cup/