T20 World Cup -Team India- ಕಾಂಗರೂ ನಾಡಿಗೆ ಭಾರತ
ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ಆಡಲು ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದೆ.
ರೋಹಿತ್ ಪಡೆ ನೇತೃತ್ವದ ಭಾರತ ತಂಡ ಗುರುವಾರ ರಾತ್ರಿ ಕಾಂಗರೂ ನಾಡಿಗೆ ವಿಮಾನ ಪ್ರಯಾಣ ಬೆಳಸಿದೆ.
2007ರ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾ ಅ.23ರಂದು ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿದೆ.ಸೂಪರ್ 12 ಹಂತ ಆಡುವ ಮುನ್ನ ಹಲವಾರು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಅ.17ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಅ.19ರಂದು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಇತೆರೆ ಆಟಗಾರರು ಆಸ್ಟ್ರೇಲಿಯಾಕ್ಕೆ ತೆರೆಳಿದರು.
ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ವಿಶ್ವಕಪ್ನಿಂದ ಹೊರ ನಡೆದಿದ್ದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಬುಮ್ರಾ ಜಾಗವನ್ನು ವೇಗಿಗಳಾದ ಮೊಹ್ಮದ್ ಶಮಿ ಅಥವಾ ದೀಪಕ್ ಚಾಹರ್ ತುಂಬಲಿದ್ದಾರೆ. ಅ.15ರವರೆಗೆ ಆಟಗಾರನನ್ನು ಬದಲಿಸಿಲು ಅವಕಾಶವಿದೆ.