T20 World Cup : ಸೆಮಿಫೈನಲ್ ಕನಸು ಕಾಣುತ್ತಿರುವ ಟೀಮ್ ಇಂಡಿಯಾ ಟಿ20 ವಿಶ್ವಕಪ್ನ ಕೊನೆಯ ಪಂದ್ಯವನ್ನಾಡಲು ಮೆಲ್ಬೋರ್ನ್ಗೆ ಬಂದಿಳಿದಿದೆ.
ಮೊನ್ನೆ ಅಡಿಲೇಡ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ 5 ರನ್ಗಳ ರೋಚಕ ಗೆಲುವು ದಾಖಲಿಸಿದ ಭಾರತ ತಂಡ ಇದೀಗ ಅಭ್ಯಾಸ ಶುರು ಮಾಡಲಿದೆ.
ಮೊಹ್ಮದ್ ಸೀರಾಜ್, ರಿಷಬ್ ಪಂತ್,ಯಜ್ವಿಂದರ್ ಚಾಹಲ್, ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದು ಟ್ರಾವಲ್ ಟು ಮೆಲ್ಬೊರ್ನ್ ಎಂದು ಬರೆದುಕೊಂಡಿದ್ದಾರೆ.
ನಾಯಕ ರೋಹಿತ್, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಕಠಿಣ ಅಭ್ಯಾಸ ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡ ಗೆದ್ದಿರುವುದರಿಂದ ಭಾರತ ತಂಡ ಜಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆಲ್ಲಲ್ಲೇಬೇಕಾದ ಅನಿವಾರ್ಯತೆ ಎದುರಾಗಿದೆ. ನ.6ರಂದು ಜಿಂಬಾಬ್ವೆ ವಿರುದ್ಧ ಸೆಣಸಲಿದೆ.
ಐತಿಹಾಸಿಕ ಎಂಸಿಜೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು ಜಿಂಬಾಬ್ವೆ ವಿರುದ್ಧ ಎಚ್ಚರಿಕೆಯಿಂದ ಆಡಬೇಕಿದೆ.
ಪಾಕಿಸ್ತಾನ ತಂಡಕ್ಕೆ ಜಿಂಬಾಬ್ವೆ ಸೋಲಿನ ಶಾಕ್ ಕೊಟ್ಟಿತ್ತು.ಅಚ್ಚರಿ ಫಲಿತಾಂಶಗಳು ಹೊರ ಬೀಳುವ ಸಾಧ್ಯತೆಗಳು ಹೆಚ್ಚಿವೆ.