T20 World Cup ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧ ಶತಕದ ನೆರವಿಇಂದ ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಡಕ್ ವರ್ತ್ ಲೂಹಿಸ್ ನಿಯಮದನ್ವಯ 5 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಸೆಮಿಫೈನಲ್ ಹೋಗುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
ಅಡಿಲೇಡ್ನಲ್ಲಿ ನಡೆದ ಗ್ರೂಪ್ 2ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ 184 ರನ್ ಕಲೆ ಹಾಕಿತು. ಬಾಂಗ್ಲಾ ತಂಡ 16 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಪೇರಿಸಿತು.
151 ರನ್ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಶಾಂಟೊ ಹಾಗೂ ಲಿಟನ್ ದಾಸ್ ಮೊದಲ ವಿಕೆಟ್ಗೆ 68 ರನ್ ಸೇರಿಸಿದರು. ಲಿಟನ್ ದಾಸ್ 21 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಬಾಂಗ್ಲಾ 7 ಓವರ್ಗೆ ವಿಕೆಟ್ ನಷ್ಟವಿಲ್ಲದೇ 66 ರನ್ ಗಳಿಸಿದ್ದಾಗ ಜೋರಾಗಿ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತ್ತು. ಅರ್ಧ ಗಂಟೆ ನಂತರ ಬಾಂಗ್ಲಾಗೇ ಡಕ್ ವರ್ತ್ ಲೂಹಿಸ್ ನಿಯಮದಂತೆ 16 ಓವರ್ಗಳಲ್ಲಿ 151ರನ್ ಗುರಿ ನೀಡಲಾಯಿತು.
ಕೊನೆಯ ಓವರ್ನಲ್ಲಿ ಬಾಂಗ್ಲಾಗೆ ಗೆಲ್ಲಲು 20 ರನ್ ಬೇಕಿತ್ತು. ಕ್ರಿಸ್ನಲ್ಲಿದ್ದ ನೂರುಲ್ ಒಂದು ಬೌಂಡರಿ ಒಂದು ಸಿಕ್ಸರ್ ಹೊಡೆದರೂ ಪ್ರಯೋಜನವಾಗಲಿಲ್ಲ.
ಶಕೀಬ್ ಅಲ್ ಹಸನ್ 13, ಆಫೀಫ್ ಹೊಸೇನ್ 3, ಯಾಸೀರ್ ಅಲಿ 1,ನೂರುಲ್ ಹೋಸೇನ್ ಅಜೇಯ 25, ತಸ್ಕಿನ್ ಅಹ್ಮದ್ ಅಜೇಯ 12 ರನ್ ಗಳಿಸಿದರು.
ಭಾರತ ಪರ ಹಾರ್ದಿಕ್ ಪಾಂಡ್ಯ 28ಕ್ಕೆ 2, ಆರ್ಷದೀಪ್ 38ಕ್ಕೆ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಭಾರತ ಪರ ಕನ್ನಡಿಗ ಕೆ.ಎಲ್.ರಾಹುಲ್ 50 ರನ್ (32 ಎಸೆತ, 3 ಬೌಂಡರಿ 4 ಸಿಕ್ಸರ್) ರೋಹಿತ್ ಶರ್ಮಾ 2ರನ್, ವಿರಾಟ್ ಕೊಹ್ಲಿ 64 ರನ್ (44 ಎಸೆತ 8 ಬೌಂಡರಿ 1 ಸಿಕ್ಸರ್), ಹಾರ್ದಿಕ್ ಪಾಂಡ್ಯ 5, ದಿನೇಶ್ ಕಾರ್ತಿಕ್ 7, ಅಕ್ಸರ್ ಪಟೇಲ್ 7, ಆರ್.ಅಶ್ವಿನ್ ಅಜೇಯ 13 ರನ್ ಗಳಿಸಿದರು.
ಬಾಂಗ್ಲಾ ಪರ ಹಸನ್ ಮಹ್ಮದ್ 47ಕ್ಕೆ 3, ಶಕೀಬ್ ಹಲ್ ಹಸನ್ 33ಕ್ಕೆ 2 ವಿಕೆಟ್ ಪಡೆದರು. ಅರ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.