ಬಹುನಿರೀಕ್ಷಿತಾ ಟಿ20 ವಿಶ್ವಕಪ್ಗೆ ಕೌಂಟ್ ಡೌನ್ ಶುರುವಾಗಿದೆ. ಕಾಂಗರೂ ನಾಡಲ್ಲಿ ನಡೆಯುವ ಬ್ಲಾಕ್ ಬಸ್ಟರ್ ಟೂರ್ನಿಯಲ್ಲಿ ಈವರೆಗೂ 6 ಲಕ್ಷರೂ. ಟಿಕೆಟ್ ಸೇಲ್ ಆಗಿದೆ ಎಂದು ಟೂರ್ನಿ ಆಯೋಜಕರು ತಿಳಿಸಿದ್ದಾರೆ.
ಭಾನುವಾರದಿಂದ ಆರಂಭವಾಗಲಿದ್ದು ಅ.22ರಿಂದ ಬಲಿಷ್ಠ ತಂಡಗಳ ಕಾದಾಟ ನಡೆಯಲಿದೆ. ಆಸ್ಟ್ರೇಲಿಯಾದ 7 ಪ್ರಮುಖ ನಗರಗಳು ಟೂರ್ನಿಯ ಆತಿಥ್ಯ ವಹಿಸುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು 90 ಸಾವಿರ ಮಂದಿ ಮೆಲ್ಬೊರ್ನ್ ಕ್ರಿಕೆಟ್ ಮೈದಾನಕ್ಕೆ ಬರಲಿದ್ದಾರೆ. ಸ್ಟ್ಯಾಂಡಗ್ ಅಪ್ ಟಿಕೆಟ್ ಗಳು 10 ನಿಮಿಷದಲ್ಲಿ ಮಾರಾಟವಾಗಿವೆ.
ಶ್ರೀಲಂಕಾ ಹಾಗೂ ನಮಿಬಿಯಾ ಪಂದ್ಯಕ್ಕೂ ಮುನ್ನ ನಡೆಯುವ ಯುಎಇ ಹಾಗೂ ನೆದರ್ ಲ್ಯಾಂಡ್ ಪಂದ್ಯ ವೀಕ್ಷಿಸಲು 36 ಸಾವಿರ ಕ್ರಿಕೆಟ್ ಅಭಿಮಾನಿಗಳು ಬರಲಿದ್ದಾರೆ
. ಈಗಾಗಲೇ ಟಿಕೆಟ್ ಗಳು ಮಾರಾಟವಾಗಿದ್ದು ಕೆಲವೇ ಟಿಕೆಟ್ ಗಳು ಬಾಕಿ ಇವೆ.
ಗೀಲಾಂಗ್ ನಲ್ಲಿ ನಡೆಯುವ ಉದ್ಘಾಟನಾ ಪಂದ್ಯಕ್ಕೆ ದೊಡ್ಡ ಅಭಿಮಾನಿಗಳ ದಂಡು ಬರುವುದನ್ನು ಎದುರು ನೋಡತ್ತಿದ್ದೇವೆ.
ಅಕ್ಟೋಬರ್ ನಲ್ಲಿ ಭರ್ತಿ ಕ್ರೀಡಾಂಗಣಗಳನ್ನು ನೋಡಲು ಖುಷಿಯಾಗುತ್ತಿದೆ ಎಂದು ಐಸಿಸಿ ಟಿ20 ವಿಶ್ವಕಪ್ ಮುಖ್ಯಸ್ಥ ಮೈಕಲ್ ಎನ್ರೈಟ್ ತಿಳಿಸಿದ್ದಾರೆ.