T20 CWC 2022 ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T20 World Cup ಟೂರ್ನಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಭಾರತದ ʼರನ್ ಮಷಿನ್ʼ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಮಹತ್ವದ ಮೈಲುಗಲ್ಲು(Milestone) ತಲುಪುವತ್ತ ಮುಖ ಮಾಡಿದ್ದಾರೆ.
ಪ್ರಸಕ್ತ ವಿಶ್ವಕಪ್ನ ಸೂಪರ್-12 ಪಂದ್ಯದಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟ್ಸ್ಮನ್ಗಳ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿರುವ ಕಿಂಗ್ ಕೊಹ್ಲಿ, ಇತ್ತೀಚೆಗಷ್ಟೇ T20 ವಿಶ್ವಕಪ್ನಲ್ಲಿ 1000 ರನ್ಗಳ ಗಡಿದಾಟಿದ್ದರು. ಆದರೆ ಇದೀಗ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟಿ20 ಕ್ರಿಕೆಟ್ ವೃತ್ತಿ ಬದುಕಿನ ಮಹತ್ವದ ಮೈಲುಗಲ್ಲು ದಾಟುವ ಲೆಕ್ಕಾಚಾರದಲ್ಲಿದ್ದಾರೆ. ಸದ್ಯ ಅದ್ಭುತ ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕೊಹ್ಲಿ, ನಾಳಿನ ಪಂದ್ಯದಲ್ಲಿ ಅತ್ಯಂತ ಸುಲಭವಾಗಿ ಈ ಗುರಿ ತಲುಪುವ ನಿರೀಕ್ಷೆ ಹೆಚ್ಚಾಗಿದೆ.
ಟಿ20 ವಿಶ್ವಕಪ್ನಲ್ಲಿ ಮಿಂಚುತ್ತಿರುವ ಕೊಹ್ಲಿ, T20Iನಲ್ಲಿ 4000 ಸಾವಿರ ರನ್ಗಳನ್ನ ಪೂರೈಸುವ ಹೊಸ್ತಿಲಲ್ಲಿದ್ದಾರೆ. ಈ ಮೈಲಿಗಲ್ಲು ತಲುಪಲು ಕಿಂಗ್ ಕೊಹ್ಲಿಗೆ 68 ರನ್ಗಳ ಅಗತ್ಯವಿದೆ. ಹೀಗಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದೇ ಆದಲ್ಲಿ, ಟಿ20 ಕ್ರಿಕೆಟ್ನಲ್ಲಿ 4000 ರನ್ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಸಹ ʼಚೇಸ್ ಮಾಸ್ಟರ್ʼ ಮುಡಿಗೇರಲಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಈವರೆಗೂ 113 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, 53.13ರ ಬ್ಯಾಟಿಂಗ್ ಸರಾಸರಿಯಲ್ಲಿ ಒಟ್ಟು 3932 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 36 ಅರ್ಧಶತಕ ಸಹ ಒಳಗೊಂಡಿದೆ. ಆದರೆ 4000 ರನ್ ಗಡಿದಾಟುವತ್ತ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ, ಜಿಂಬಾಬ್ವೆ ವಿರುದ್ಧ ಮತ್ತೊಂದು ಬೊಂಬಾಟ್ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಅಭಿಮಾನಿಗಳು ಎಂಸಿಜಿಯತ್ತ ಮುಖ ಮಾಡಿದ್ದಾರೆ.