ಪುಣೆಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಹರ್ಮನ್ ಪ್ರಿತ್ ಕೌರ್ ನೇತೃತ್ವದ ಸೂಪರ್ ನೋವಾಸ್ 49 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಸ್ಮೃತಿ ಮಂದಾನಾ ನೇತೃತ್ವದ ಟ್ರೈಲ್ ಬ್ಲೇಜರ್ಸ್ ಹೋರಾಟ ನೀಡದೆ ಸೋತಿದ್ದು ನಿರಾಸೆ ಮೂಡಿಸಿತು.
ಮೊದಲು ಬ್ಯಾಟ್ ಮಾಡಿದ ಸೂಪರ್ ನೋವಾಸ್ ಪ್ರಿಯಾ ಪೂನಿಯಾ (22), ಡಿಯಾಂಡ್ರಾ ಡಾಟಿನ್ (32), ಹರ್ಲಿನ್ ಡಿಯೋಲ್ (35) ಮತ್ತು ನಾಯಕಿ ಹರ್ಮನ್ ಪ್ರಿತ್ ಕೌರ್ (37) ಉತ್ತಮ ಆಟದ ನೆರವಿನಿಂದ 20 ಓವರುಗಳಲ್ಲಿ 163 ರನ್ಗಳಿಗೆ ಆಲೌಟ್ ಆಯಿತು. ಬ್ಲೇಜರ್ಸ್ ಪರ ಮ್ಯಾಥ್ಯೂಸ್ 3 ವಿಕೆಟ್ ಪಡೆದರು.
ಗುರಿ ಬೆನ್ನಟ್ಟ ಹೊರಟ ಬ್ಲೇಜರ್ಸ್ ಉತ್ತಮ ಆರಂಭ ಪಡೆದರೂ ನಂತರ ಎಡವಿತು. ನಾಯಕಿ ಮಂದಾನಾ (34), ಮ್ಯಾಥ್ಯೂಸ್ (18) ಮತ್ತು ಜೆಮಿಮಾ (24) ರನ್ಗಳಿಸಿದರು. ಉಳಿದ ಬ್ಯಾಟರ್ ಗಳು ಒಂದಂಕಿಗೆ ಆಟ ಮುಗಿಸಿದರು. ಪೂಜಾ ವಸ್ತ್ರಾರ್ಕರ್ 12 ರನ್ಗೆ 4 ವಿಕೆಟ್ ಪಡೆದು ಮಿಂಚಿದರು.