ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆಯುವುದು ಐಪಿಎಲ್ನ 15ನೇ ಆವೃತ್ತಿಯ ಫೈನಲ್ ಸ್ಥಾನಕ್ಕೆ ಫೈಟ್. ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮೊದಲಿಗರಾಗಿ ಫೈನ್ಗೇರಲು ಜಿದ್ದಾಜಿದ್ದಿ ನಡೆಯಲಿದೆ. ಗುಜರಾತ್ ಐಪಿಎಲ್ನ ಹೊಸ ತಂಡವಾಗಿದೆ, ರಾಜಸ್ಥಾನ ರಾಯಲ್ಸ್ ಐಪಿಎಲ್ ಉದ್ಘಾಟನಾ ಆವೃತ್ತಿಯ ಚಾಂಪಿಯನ್. ಅದಾದ ಬಳಿಕ ರಾಯಲ್ಸ್ ಮತದೂ ಫೈನಲ್ ತಲುಪಿಲ್ಲ. ರಾಯಲ್ಸ್, ಫೈನಲ್ಗೇರುವ ಮೂಲಕನ ಮೊದಲ ಕ್ಯಾಪ್ಟನ್ ದಿವಂಗತ ಶೇನ್ ವಾರ್ನ್ ಗೌರವ ನೀಡಲು ಸಿದ್ಧತೆ ಮಾಡಿಕೊಂಡಿದೆ
ಎರಡೂ ತಂಡಗಳ ಬಲಾಬಲ ಒಂದೇ ರೀತಿಯಾಗಿದೆ. ಆತ್ಮವಿಶ್ವಾಸಸ ಎರಡೂ ತಂಡದ ದೊಡ್ಡ ಶಕ್ತಿ. ವೇಗದ ಬೌಲಿಂಗ್, ಸ್ಪಿನ್ ಬೌಲಿಂಗ್, ಆಲ್ರೌಂಡರ್ ಗಳು ಮತ್ತು ಬ್ಯಾಟರ್ಗೂ ತಂಡದಲ್ಲೂ ಸಮಾನಾಗಿ ಇದ್ದಾರೆ. ಆದ್ರೆ ಸಿಕ್ಸರ್ ಹೊಡೆಯುವುದರಲ್ಲಿ ಟೈಟಾನ್ಸ್ ಹಿಂದೆ ಬಿದ್ದಿದೆ| ಟೈಟಾನ್ಸ್ ಕೇವಲ 69 ಸಿಕ್ಸರ್ ಬಾರಿಸಿ ಕೊನೆಯ ಸ್ಥಾನದಲ್ಲಿದ್ದರೆ, ರಾಯಲ್ಸ್ 116 ಸಿಕ್ಸರ್ ಬಾರಿಸಿ ಅಗ್ರಸ್ಥಾನದಲ್ಲಿದೆ.
ರಾಯಲ್ಸ್ ತಂಡದ ಬ್ಯಾಟಿಂಗ್ಗೆ ಜೋಸ್ ಬಟ್ಲರ್ ಆಧಾರ. ಬಟ್ಲರ್ ಟೂರ್ನಿಯ ಎರಡನೇ ಅವಧಿಯಲ್ಲಿ ಮಿಂಚಿಲ್ಲ ಅನ್ನುವುದು ಕೊಂಚ ತಲೆನೋವಿಗೆ ಕಾರಣವಾಗಿದೆ. ಯಶಸ್ವಿ ಜೈಸ್ವಾಲ್ ಸಿಕ್ಕ ಅವಕಾಶ ಬಾಚಿಕೊಂಡಿದ್ದಾರೆ. ದೇವದತ್ ಪಡಿಕಲ್ ಇಂಪ್ರೆಸ್ಸಿವ್ ಆಗಿಲ್ಲ. ನಾಯಕ ಸಂಜು ಸ್ಯಾಮ್ಸನ್ ಸರಿಯಾದ ಆಟ ಆಡಬೇಕಿದೆ. ಬ್ಯಾಟ್ಸ್ ಮನ್ ಆಗಿ ಅಶ್ವಿನ್ ನೀಡುತ್ತಿರುವ ಕೊಡುಗೆ ತಂಡಕ್ಕೆ ಅಮೂಲ್ಯ. ಶಿಮ್ರನ್ ಹೆಟ್ಮಯರ್, ರಿಯಾನ್ ಪರಾಗ್ ಫಿನಿಷರ್ಗಳು. ಟ್ರೆಂಟ್ ಬೋಲ್ಟ್ ದುಬಾರಿ ಆದರೂ ತಂಡಕ್ಕೆ ಬೇಕೇ ಬೇಕು. ಪ್ರಸಿಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಬೆಡ್ ಮೆಕಾಯ್ ಮತ್ತು ಕುಲ್ ದೀಪ್ ಸೇನ್ ಉತ್ತಮ ಲಯದಲ್ಲಿದ್ದಾರೆ. ಚಹಲ್ ಪರ್ಪಲ್ ಕ್ಯಾಪ್ಒಡೆಯ. ಅಶ್ವಿನ್ ಬೌಲಿಂಗ್ನಲ್ಲಿ ರನ್ರೇಟ್ಗೆ ಕಡಿವಾಣ ಹಾಕಿದ್ದಾರೆ.
ಈಡನ್ ಗಾರ್ಡನ್ಸ್ ಪಿಚ್ ಬ್ಯಾಟಿಂಗ್ ಫ್ರೆಂಡ್ಲಿ. ಆದರೆ ಕೊಲ್ಕತ್ತಾದಲ್ಲಿ ಮಳೆಯಾಗುತ್ತಿರುವುದರಿಂದ ಪಂದ್ಯ ನಡೆಯುತ್ತಾ ಅನ್ನುವ ಪ್ರಶ್ನೆ ಎದ್ದಿದೆ.