ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ವೇಗದ ಬೌಲರ್ ಉಮ್ರನ್ ಮಲಿಕ್ರದ್ದೇ ಮಾತು. ವಿದೇಶಿ ವೇಗದ ಬೌಲರ್ ಗಳ ನಡುವೆ ಭಾರತೀಯ ವೇಗಿಯೊಬ್ಬ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜಮ್ಮು ಕಾಶ್ಮೀರದ ಈ ಯುವ ವೇಗಿ ಐಪಿಎಲ್ 2022ರಲ್ಲಿ ಅತೀ ವೇಗದ ಎಸೆತ ಹಾಕಿದ ದಾಖಲೆ ಬರೆದಿದ್ದಾರೆ. ಈ ಬಾರಿಯ ಐಪಿಎಲ್ನ ಟಾಪ್ 5 ವೇಗದ ಬೌಲಿಂಗ್ ನಲ್ಲಿ ಉಮ್ರನ್ ಮಲಿಕ್ ಅಗ್ರ 4 ಎಸೆತಗಳನ್ನು ಎಸೆದಿದ್ದಾರೆ.
ಐಪಿಎಲ್ 2022- ಫಾಸ್ಟೆಸ್ಟ್ ಚೆಂಡು
ಬೌಲರ್ ಬೌಲಿಂಗ್ ವೇಗ
- ಉಮ್ರನ್ ಮಲಿಕ್ 157 ಕಿ.ಮೀ/ ಗಂಟೆಗೆ
- ಉಮ್ರನ್ ಮಲಿಕ್ 154.8 ಕಿ.ಮೀ/ ಗಂಟೆಗೆ
- ಉಮ್ರನ್ ಮಲಿಕ್ 154 ಕಿ.ಮೀ/ ಗಂಟೆಗೆ
- ಉಮ್ರನ್ ಮಲಿಕ್ 154 ಕಿ.ಮೀ/ ಗಂಟೆಗೆ
- ಲೊಕಿ ಫರ್ಗ್ಯೂಸನ್ 153.9 ಕಿ.ಮೀ/ಗಂಟೆಗೆ
ಉಮ್ರನ್ ಮಲಿಕ್ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ ಚೆಂಡೆಸೆದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಚೆಂಡು ಎಸೆದಿದ್ದಾರೆ. ಉಮ್ರನ್ ಮಲಿಕ್ ಐಪಿಎಲ್ನ ಫಾಸ್ಟೆಸ್ಟ್ ಡೆಲಿವರಿಗಳ ಪೈಕಿ ಅಗ್ರ 5ರಲ್ಲಿ 2 ಬಾರಿ ಕಾಣಿಸಿಕೊಂಡಿದ್ದಾರೆ.
ಐಪಿಎಲ್ ಫಾಸ್ಟೆಸ್ಟ್ ಬಾಲ್
ಬೌಲರ್ ಬೌಲಿಂಗ್ ವೇಗ
- ಶಾನ್ ಟೈಟ್ 157.7 ಕಿ.ಮೀ/ ಗಂಟೆಗೆ
- ಉಮ್ರನ್ ಮಲಿಕ್ 157 ಕಿ.ಮೀ/ ಗಂಟೆಗೆ
- ಅನ್ರಿಚ್ ನೋರ್ಟ್ಜೆ 156.2 ಕಿ.ಮೀ/ ಗಂಟೆಗೆ
- ಅನ್ರಿಚ್ ನೋರ್ಟ್ಜೆ 155.2 ಕಿ.ಮೀ/ ಗಂಟೆಗೆ
- ಉಮ್ರನ್ ಮಲಿಕ್ 154.8 ಕಿ.ಮೀ/ ಗಂಟೆಗೆ