ಐಪಿಎಲ್ 15ನೇ ಆವೃತ್ತಿಯ ಕಟ್ಟ ಕಡೆಯ ಪಂದ್ಯ ಇದು. ವಾಂಖೆಡೆಯಲ್ಲಿ ನಡೆಯುವ ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯಕ್ಕೆ ಯಾವುದೇ ಮಹತ್ವ ಇಲ್ಲ. ಆದರೆ ಪ್ರತಿಷ್ಠೆ ಇದೆ. ಯಾರು ಗೆದ್ದರೂ 6ನೇ ಸ್ಥಾನ ಫಿಕ್ಸ್..!
ರಾಹುಲ್ ತ್ರಿಪಾಠಿ ಮತ್ತು ಅಭಿಷೇಕ್ ಶರ್ಮಾ ಬ್ಯಾಟಿಂಗ್ ನಲ್ಲಿ ಮಿಂಚಿದ್ದಾರೆ. ಉಮ್ರನ್ ಮಲಿಕ್ ಫಾಸ್ಟ್ ಅಂಡ್ ಫ್ಯುರಿಯಸ್ ಆಗಿ ಇಂಪ್ಯಾಕ್ಟ್ ಮಾಡಿದ್ದಾರೆ. ಪಂಜಾಬ್ ಪರ ಡೆತ್ ಓವರುಗಳಲ್ಲಿ ಅರ್ಶದೀಪ್ 7.31ರ ಎಕಾನಮಿ ಹಾಗೂ ಕಗಿಸೋ ರಬಾಡಾ 8.30 ಎಕಾನಮಿ ಮೂಲಕ ಮಿಂಚಿದ್ದಾರೆ. ಶಿಖರ್ ಧವನ್ ಮತ್ತೊಂದು ಸೀಸನ್ನಲ್ಲಿ 400ಕ್ಕೂ ಅಧಿಕ ರನ್ಗಳ ಗಡಿ ದಾಟಿದ್ದಾರೆ. ಲಿಯಂ ಲಿವಿಂಗ್ ಸ್ಟೋನ್ ಟಾಪ್ ಸಿಕ್ಸ್ ಹಿಟ್ಟರ್ ಗಳಲ್ಲಿ ಒಬ್ಬರು. ಜಿತೇಶ್ ಶರ್ಮಾ ಭವಿಷ್ಯದ ಕ್ರಿಕೆಟರ್ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಇಷ್ಟೆಲ್ಲಾ ಇದ್ದರೂ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ಕ್ವಾಲಿಫೈಯಿಂಗ್ ಫೈಟ್ನಲ್ಲಿಲ್ಲ. ಆದರೆ ಎರಡೂ ತಂಡಗಳೂ ಒಂದು ಉತ್ತಮ ಪಂದ್ಯವನ್ನು ಕೊಟ್ಟು ಟೂರ್ನಿಗೆ ಬೈ ಬೈ ಹೇಳುವ ಲೆಕ್ಕಾಚಾರದಲ್ಲಿವೆ. ಸನ್ ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ತವರಿಗೆ ಹೋಗಿರುವುದರಿಂದ ಭುವನೇಶ್ವರ್ ಕುಮಾರ್ ತಂಡ ಮುನ್ನಡೆಸುವ ಸಾಧ್ಯತೆ ಇದೆ., ನಿಕೊಲಸ್ ಪೂರನ್ ಕಡೆಗೂ ನಾಯಕತ್ವದ ಜವಾಬ್ದಾರಿ ಬರಬಹುದು. ಒಟ್ಟಿನಲ್ಲಿ ಐಪಿಎಲ್ನ ಕಟ್ಟ ಕಡೆಯ ಲೀಗ್ ಮ್ಯಾಚ್ ಸುಮ್ಮನೆ ಒಂದು ಪಂದ್ಯ ಅನ್ನುವ ಹಾಗಿದೆ.