ಈ ಪಂದ್ಯಕ್ಕೆ ಅಂಕಪಟ್ಟಿಯ ಲೆಕ್ಕಾಚಾರದಲ್ಲಿ ಮಹತ್ವವಿಲ್ಲ. ಆದರೆ ಸೋಲು, ಗೆಲುವಿನ ಲೆಕ್ಕಾಚಾರವಿದೆ. ಹೀಗಾಗಿ ರಣತಂತ್ರವೂ ನಡೆಯುತ್ತಿದೆ. ಕೊನೆಯ ಲೀಗ್ ಪಂದ್ಯದ ಗೇಮ್ ಪ್ಲಾನ್ ಬಗ್ಗೆಯೂ ಚರ್ಚೆ ಆಗುತ್ತಿದೆ.
ಲೆಗ್ ಸ್ಪಿನ್ ಕಮಾಲ್..!
ಪಂಜಾಬ್ ಕಿಂಗ್ಸ್ ಲೆಗ್ಗಿ ರಾಹುಲ್ ಚಹರ್ ರಾಹುಲ್ ತ್ರಿಪಾಠಿ ಮತ್ತು ಅಭಿಷೇಕ್ ಶರ್ಮಾ ವಿರುದ್ಧ ಹೆಚ್ಚು ಯಶ ಕಂಡಿದ್ದಾರೆ. ಚಹರ್ ಅಭಿಷೇಕ್ ವಿರುದ್ಧ 2 ಬಾರಿ ಯಶ ಕಂಡರೆ, ತ್ರಿಪಾಠಿ 4 ಇನ್ನಿಂಗ್ಸ್ ಗಳಲ್ಲಿ 2 ಬಾರಿ ಔಟ್ ಆಗಿದ್ದಾರೆ. ಆದರೆ ನಿಕೊಲಸ್ ಪೂರನ್ ಚಹರ್ ವಿರುದ್ದ 154ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಲಿಯಂ ಲಿವಿಂಗ್ ಸ್ಟೋನ್ ಸಿಕ್ಸರ್ ಕಿಂಗ್ ಅನ್ನುವ ಬಿರುದು ಪಡೆದಿದ್ದಾರೆ. ಆದರೆ ಲೆಫ್ಟ್ ಸ್ಪಿನ್ನರ್ಗಳ ಮುಂದೆ ಎಡವಿದ್ದಾರೆ. ಹೀಗಾಗಿ ಲಿವಿಂಗ್ ಸ್ಟೋನ್ ಎದುರು ಕೂಡ ದೊಡ್ಡ ಸವಾಲು ಇದೆ.
ನಂಬರ್ ಗೇಮ್:
- ಪಂಜಾಬ್ ಕಿಂಗ್ಸ್ ಕೊನೆಯ 4 ಓವರುಗಳಲ್ಲಿ ಕೇವಲ 9.73 ಸರಾಸರಿಯಲ್ಲಿ ರನ್ಗಳಿಸಿದೆ. ಇದು ಈ ಬಾರಿಯ ಐಪಿಎಲ್ನ ಅತ್ಯಂತ ಕಳಪೆ ಬ್ಯಾಟಿಂಗ್. ಬೌಲಿಂಗ್ನಲ್ಲಿ ಸನ್ ರೈಸರ್ಸ್ ಕೊನೆಯ 4 ಓವರುಗಳಲ್ಲಿ 11.91 ರನ್ ಕೊಟ್ಟು ದುಬಾರಿ ತಂಡವೆನಿಸಿದೆ.
- ಐಪಿಎಲ್ 2022ರಲ್ಲಿ ಕಗಿಸೋ ರಬಾಡ ಆಡಿರುವ 12 ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಕನಿಷ್ಠ ಒಂದೊಂದು ವಿಕೆಟ್ ಪಡೆದಿದ್ದಾರೆ.
- ಪಂಜಾಬ್ ಕಿಂಗ್ಸ್ ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಡೆತ್ ಓವರ್ ಬೌಲಿಂಗ್ ಸಾಧನೆ ಮಾಡಿದೆ. ಕೊನೆಯ 4 ಓವರುಗಳಲ್ಲಿ ಕಿಂಗ್ಸ್ ಕೇವಲ 16 ಸಿಕ್ಸರ್ ಮಾತ್ರ ಬಿಟ್ಟುಕೊಟ್ಟಿದೆ. ಇದೇ ವೇಳೆ ಸನ್ ರೈಸರ್ಸ್ ಕೊನೆಯ 4 ಓವರುಗಳ ಬ್ಯಾಟಿಂಗ್ ವೇಳೆ 18 ಸಿಕ್ಸರ್ ಮಾತ್ರ ಬಾರಿಸಿದೆ.