ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೌಲರ್ ಗಳು ಮ್ಯಾಚ್ ವಿನ್ನರ್ ಗಳು ಅನ್ನುವುದರಲ್ಲಿ ಎರಡು ಮಾತಿಲ್ಲ. ಬೌಲರ್ ಗಳು ಎಸೆಯುವ ಒಂದೊಂದು ಡಾಟ್ ಬಾಲ್ ಗಳು ಕೂಡ ಗೋಲ್ಡನ್ ಬಾಲ್ ಗಳು. ಇಂತಹ ಗೋಲ್ಡನ್ ಬಾಲ್ ಗಳು ಅಂತಿಮವಾಗಿ ಪಂದ್ಯದ ಫಲಿತಾಂಶ ನಿರ್ಧಾರ ಮಾಡುತ್ತವೆ.
ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ಗಳಲ್ಲಿ ಸುನೀಲ್ ನರೈನ್ ಅಗ್ರಜ. ನರೈನ್ 48 ಓವರ್ ಎಸೆದು 128 ಡಾಟ್ ಬಾಲ್ ಹಾಕಿದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ 48 ಓವರುಗಳ ಪ್ರಕಾರ 21ಕ್ಕಿಂತಲೂ ಹೆಚ್ಚಿನ ಓವರುಗಳಲ್ಲಿ ರನ್ ಬಂದಿಲ್ಲ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಉಮೇಶ್ ಯಾದವ್ 2ನೇ ಸ್ಥಾನದಲ್ಲಿದ್ದಾರೆ. ಪ್ರಸಿಧ್ ಕೃಷ್ಣ,ಮೊಹಮ್ಮದ್ ಶಮಿ ಮತ್ತು ಉಮ್ರನ್ ಮಲಿಕ್ ಟಾಪ್ 5 ಡಾಟ್ ಬಾಲ್ ಎಸೆದ ಪ್ರಮುಖ ಬೌಲರ್ ಗಳು. ಭಾರತೀಯ ಬೌಲರ್ ಗಲು ಈ ಲಿಸ್ಟ್ ನಲ್ಲೂ ಮೇಲುಗೈ ಸಾಧಿಸಿದ್ದಾರೆ ಅನ್ನುವುದು ಕುತೂಹಲಕಾರಿಯಾಗಿದೆ.
ಬೌಲರ್ ಓವರ್ ಡಾಟ್ ಬಾಲ್
ಸುನೀಲ್ ನರೈನ್ 48 128
ಉಮೇಶ್ ಯಾದವ್ 40 123
ಪ್ರಸಿಧ್ ಕೃಷ್ಣ 44 123
ಮೊಹಮ್ಮದ್ ಶಮಿ 44 120
ಉಮ್ರನ್ ಮಲಿಕ್ 40 114