ಫಿನ್ ಶಾರ್ಟ್ ಕೋರ್ಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಈಜು ಪಟು ಶ್ರೀಹರಿ ನಟರಾಜನ್ ಸಾಧನೆ ಮಾಡಿದ್ದಾರೆ.
20 ವರ್ಷದ ಶ್ರೀಹರಿ ಭಾರತದ ಪರ 50 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇವರು ಹೀಟ್ಸ್ ವಿಭಾಗದಲ್ಲಿ ಒಟ್ಟಾರೆಯಾಗಿ 26ನೇ ಸ್ಥಾನ ಪಡೆದು ಬೀಗಿದರೂ, ಸೆಮಿಫೈನಲ್ಸ್ ಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. ಶ್ರೀಹರಿ 24.40 ಸೆಕೆಂಡ್ ಗಳಲ್ಲಿ ನಿಗದಿತ ದೂರ ಕ್ರಮಿಸಿದರು.
ಶ್ರೀಹರಿ ಮೊದಲ ದಿನ ತಮ್ಮದೇ ದಾಖಲೆಯನ್ನು ಉತ್ತಮವಾಗಿಸಿದರು. ಇವರು 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದ್ದರು.
ಇದು ನಟರಾಜ ಅವರ ಎರಡನೇ ‘ಅತ್ಯುತ್ತಮ ಭಾರತೀಯ ಸಮಯ’ ಸ್ಪರ್ಧೆಯಲ್ಲಿದೆ. ಬೆಂಗಳೂರು ಮೂಲದ ಈಜುಪಟು ಆರಂಭಿಕ ದಿನ 100 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ತಮ್ಮ ದಾಖಲೆಯನ್ನು ಸುಧಾರಿಸಿಕೊಂಡರು.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ನಟರಾಜ್, ಸಜನ್ ಪ್ರಕಾಶ್ ನಂತರ ಒಲಿಂಪಿಕ್ಸ್ಗೆ ಅರ್ಹತಾ ಸಮಯದ ‘ಎ’ ಸಾಧನೆ ಮಾಡಿದ ಎರಡನೇ ಭಾರತೀಯ ಈಜುಗಾರ.