ವೈಟ್ ಬಾಲ್ ಕ್ರಿಕೆಟ್ನಲ್ಲಿ ಸಮಬಲದ ಪ್ರದರ್ಶನ ನೀಡಿದ್ದ ಅತಿಥೇಯ ಶ್ರೀಲಂಕಾ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಲಿದೆ.
ಗಾಲೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಟೆಸ್ಟ್ ಪಂದ್ಯಕ್ಕಾಗಿ ಎರಡು ತಂಡಗಳು ಸಜ್ಜಾಗಿವೆ. ಶ್ರೀಲಂಕಾ ಪ್ರವಾಸದ ಆರಂಭದಲ್ಲಿ ನಡೆದ ಟಿ20 ಸರಣಿಯಲ್ಲಿ 2-1ರ ಅಂತರದೊಂದಿಗೆ ಆಸ್ಟ್ರೇಲಿಯಾ ಪ್ರಶಸ್ತಿ ಗೆದ್ದಿತ್ತು. ನಂತರ ನಡೆದ ಏಕದಿನ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ ಶ್ರೀಲಂಕಾ 3-2ರಿಂದ ಗೆದ್ದು ತಿರುಗೇಟು ನೀಡಿತ್ತು. ಹೀಗಾಗಿ ಸೀಮಿತ ಓವರ್ಗಳ ಸರಣಿಯಲ್ಲಿ ಮಿಂಚಿದ್ದ ಎರಡು ತಂಡಗಳು ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ.
ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಭಾಗವಾಗಿ ನಡೆಯುತ್ತಿರುವ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎರಡು ತಂಡಗಳು ತಮ್ಮದೇ ರಣತಂತ್ರ ರೂಪಿಸಿವೆ. ಪ್ರವಾಸಿ ಆಸೀಸ್ ಆಟಗಾರರಿಗೆ ಸ್ಪಿನ್ ಮೂಲಕ ಕಮಾಲ್ ಮಾಡಬೇಕೆಂಬ ಕಾರಣಕ್ಕೆ ಲಂಕಾ ತಂಡ ಸ್ಪಿನ್ನರ್ಗಳಿಗೆ ತಂಡದಲ್ಲಿ ಹೆಚ್ಚಾಗಿ ಸ್ಥಾನ ನೀಡಿದೆ. ಅಂತೆಯೇ ಆಸ್ಟ್ರೇಲಿಯಾ ಸಹ ಪರಿಣಾಮಕಾರಿ ಸ್ಪಿನ್ ದಾಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಇಬ್ಬರು ಪ್ರಮುಖ ಸ್ಪಿನ್ನರ್ಗಳನ್ನು ತಂಡಕ್ಕೆ ಆಯ್ಕೆ ಮಾಡಲಿದೆ.
ಸಂಭಾವ್ಯ ತಂಡಗಳು:
ಶ್ರೀಲಂಕಾ: ದಿಮುತ್ ಕರುಣಾರತ್ನೆ, ಪತುಮ್ ನಿಸ್ಸಂಕ, ಕುಸಲ್ ಮೆಂಡಿಸ್, ಏಂಜೆಲೋ ಮ್ಯಾಥೀವ್ಸ್, ಧನಂಜಯ ಡಿಸಿಲ್ವಾ, ದಿನೇಶ್ ಚಂದಿಮಾಲ್, ನಿರೋಷನ್ ಡಿಕ್ವೆಲ್ಲಾ, ಚಮಿಕಾ ಕರುಣಾರತ್ನೆ, ಲಸಿತ್ ಎಂಬುಲ್ದೇನಿಯಾ, ಒಶಾದ್ ಫರ್ನಾಂಡೋ, ದಿಲ್ಶಾನ್ ಮಕ್ಸೂದ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಸ್ಚೆಗ್ನೆ, ಸ್ಟೀವ್ ಸ್ಮಿತ್, ಕೆಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ನ್ಯಾಥನ್ ಲಿಯಾನ್, ಜೋಶ್ ಹೇಜ಼ಲ್ವುಡ್, ಮಿಚೆಲ್ ಸ್ವೀಪ್ಸನ್, ಗ್ಲೆನ್ ಮ್ಯಾಕ್ಸ್ವೆಲ್.