ಮೊಯಿನ್ ಅಲಿ(48) ಜವಾಬ್ದಾರಿಯ ಆಟದ ನಡುವೆಯೂ ಸನ್ರೈಸರ್ಸ್ ಹೈದ್ರಾಬಾದ್ ಬೌಲರ್ಗಳ ಬಿಗು ಬೌಲಿಂಗ್ ದಾಳಿಗೆ ಸಿಲುಕಿದ ಚೆನ್ನೈ ಸೂಪರ್ ಕಿಂಗ್ಸ್ 154 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ಡಿವೈ ಪಾಟೀಲ್ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ, ಮತ್ತೊಮ್ಮೆ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ 20 ಓವರ್ಗಳಲ್ಲಿ 7 ವಿಕೆಟ್ಗೆ 154 ರನ್ಗಳಿಸಿತು. ಸೂಪರ್ ಕಿಂಗ್ಸ್ ಪರ ಮೊಯೀನ್ ಅಲಿ(48), ಅಂಬಟಿ ರಾಯುಡು(27) ತಂಡಕ್ಕೆ ನೆರವಾದರು.
ಟಾಸ್ ಸೋತ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಉತ್ತಮ ಮೊತ್ತ ಕಲೆಹಾಕುವ ನಿರೀಕ್ಷೆಯಲ್ಲಿ ಕಣಕ್ಕಿಳಿದ ರಾಬಿನ್ ಉತ್ತಪ್ಪ(15) ಹಾಗೂ ಋತುರಾಜ್ ಗಾಯಕ್ವಾಡ್(16) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಜೊತೆಯಾದ ಮೊಯೀನ್ ಅಲಿ 48 ರನ್ (35 ಬಾಲ್, 3 ಬೌಂಡರಿ, 2 ಸಿಕ್ಸರ್) ಹಾಗೂ ಅಂಬಟಿ ರಾಯುಡು 27 ರನ್(27 ಬಾಲ್, 4 ಬೌಂಡರಿ) 62 ರನ್ಗಳ ಜೊತೆಯಾಟವಾಡಿದರು.
ನಂತರ ಬಂದ ಶಿವಂ ದುಬೆ(3), ಎಂ.ಎಸ್.ಧೋನಿ(3) ಯಾವುದೇ ಕಮಾಲ್ ಮಾಡಲಿಲ್ಲ. ಆದರೆ ಇನ್ನಿಂಗ್ಸ್ ಕೊನೆಯಲ್ಲಿ ಬಿರುಸಿನ ಆಟವಾಡಿದ ನಾಯಕ ರವೀಂದ್ರ ಜಡೇಜಾ 23 ರನ್ (15 ಬಾಲ್, 2 ಬೌಂಡರಿ, 1 ಸಿಕ್ಸರ್) ಹಾಗೂ ಡ್ವೇನ್ ಬ್ರಾವೋ 8* ರನ್ಗಳಿಸಿದರು. ಸನ್ರೈಸರ್ಸ್ ಹೈದ್ರಾಬಾದ್ ಪರ ವಾಷಿಂಗ್ಟನ್ ಸುಂದರ್(2/21), ಟಿ. ನಟರಾಜನ್(2/30), ಮಾಕ್ರಂ, ಭುವನೇಶ್ವರ್ ಹಾಗೂ ಜಾನ್ಸೆನ್ ತಲಾ 1 ವಿಕೆಟ್ ಪಡೆದರು.