ವಿರಾಟ್ ಅಟ್ಟಿಟ್ಯೂಡ್ ಇಷ್ಟ ಎಂದ ದಾದಾ sourav-ganguly sportskarnataka
ವಿರಾಟ್ ಕೊಹ್ಲಿಯ ವರ್ತನೆ ನನಗೆ ತುಂಬಾ ಇಷ್ಟ. ಅವರು ಸಾಕಷ್ಟು ಹೋರಾಟದ ಮನೋಭಾವವನ್ನು ತೋರಿಸುತ್ತಾರೆ.
ಆದರೆ ಕೋಪ ಹೆಚ್ಚು ಎಂದು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವರ್ತನೆಯನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಡಿ ಹೊಗಳಿದ್ದಾರೆ.
ಅಂದಹಾಗೆ ಕೆಲ ದಿನಗಳಿಂದ ಟೀಂ ಇಂಡಿಯಾ ಗೊಂದಲದ ಗೂಡಾಗಿದೆ. ಟಿ 20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರನ್ನು ಇತ್ತೀಚೆಗೆ ಏಕದಿನ ಕ್ಯಾಪ್ಟನ್ಸಿಯಿಂದ ವಜಾ ಮಾಡಲಾಗಿದೆ.
ಬಿಸಿಸಿಐನ ಈ ಸಡನ್ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಏಕದಿನ ಕ್ರಿಕೆಟ್ ನ ನಾಯಕನಾಗಿ ವಿರಾಟ್ ಮುಂದುವರೆಯುತ್ತೇನೆ ಎಂದು ಹೇಳಿದರೂ ಬಿಸಿಸಿಐ ಅವರನ್ನ ವಜಾಗೊಳಿಸಿದ್ದು ಯಾಕೆ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.
ಈ ವಿಚಾರವಾಗಿ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟಿ 20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್ ಬಳಿ ಕೋರಿದ್ದೆ. ಆದರೇ ಅವರು ನನ್ನ ಮಾತು ಕೇಳಿಲ್ಲ ಎಂದು ಹೇಳಿದ್ದರು.
ಗಂಗೂಲಿಯ ಈ ಹೇಳಿಕೆಯನ್ನು ವಿರಾಟ್ ಕೊಹ್ಲಿ ಅಲ್ಲಗೆಳೆದಿದ್ದರು. ಟಿ 20 ಕ್ಯಾಪ್ಟನ್ಸಿಯನ್ನು ಬಿಡಬೇಡ ಎಂದು ನನಗೆ ಯಾರು ಹೇಳಿಲ್ಲ. ಬಿಸಿಸಿಐ ಅಧ್ಯಕ್ಷರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ದಾದಾ ವಿರುದ್ಧ ಬುಸುಗುಟ್ಟಿದ್ದರು.
ಈ ಎಲ್ಲಾ ಬೆಳವಣಿಗೆಗಳು ಈ ಇಬ್ಬರ ಮಧ್ಯೆ ಮುಸುಕಿನ ನಡೆಯುತ್ತಿದೆ ಎಂಬ ಅಂಶವನ್ನು ಹೊರ ಹಾಕಿದ್ದವು.
ಇದೀಗ ಕಾರ್ಯಕ್ರಮವೊಂದರಲ್ಲಿ ಸೌರವ್ ಗಂಗೂಲಿ, ವಿರಾಟ್ ಅಟ್ಟಿಟ್ಯೂಡ್ ಅನ್ನು ಮೆಚ್ಚಿಕೊಂಡಿದ್ದಾರೆ.
ಡಿಸೆಂಬರ್ 18 ರಂದು ಗುರುಗ್ರಾಮ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಂಗೂಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಂಗೂಲಿ ಕೊಹ್ಲಿ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.
ವಾಸ್ತವವಾಗಿ, ಕಾರ್ಯಕ್ರಮದಲ್ಲಿ ನೀವು ಯಾವ ಕ್ರಿಕೆಟಿಗನ ವರ್ತನೆಯನ್ನು ಹೆಚ್ಚು ಇಷ್ಟಪಟ್ಟಿದ್ದೀರಿ ಎಂದು ಗಂಗೂಲಿಯನ್ನು ಕೇಳಲಾಯಿತು.
ಇದಕ್ಕೆ ಗಂಗೂಲಿ ಉತ್ತರವಾಗಿ, ಕೊಹ್ಲಿ ಹೆಸರು ಹೇಳಿದರು. ”ನನಗೆ ವಿರಾಟ್ ಕೊಹ್ಲಿ ವರ್ತನೆ ತುಂಬಾ ಇಷ್ಟ. ಅವರು ಸಾಕಷ್ಟು ಹೋರಾಟದ ಮನೋಭಾವವನ್ನು ತೋರಿಸುತ್ತಾರೆ. ಆದರೆ ಕೋಪ ಹೆಚ್ಚಿದೆ ಎಂದಿದ್ದಾರೆ.
ಇದೇ ವೇಳೆ ಜೀವನದಲ್ಲಿ ಒತ್ತಡವನ್ನು ಎದುರಿಸುವುದು ಹೇಗೆ ಎಂದು ಕೇಳಿದಾಗ.. “ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಹೆಂಡತಿ ಮತ್ತು ಸ್ನೇಹಿತರು ಮಾತ್ರ ನಮಗೆ ಒತ್ತಡವನ್ನು ನೀಡುತ್ತಾರೆ, ”ಎಂದು ತಮಾಷೆ ಮಾಡಿದ್ದಾರೆ.