ಆ್ಯಶಸ್ ಸರಣಿ | ಸ್ಮಿತ್ ನಿಮಗೇನಾಗಿದೆ..? Smith saaksha tv
ಅಡಿಲೇಡ್ ಓವಲ್ನಲ್ಲಿ ನಡೆಯುತ್ತಿರುವ ಆ್ಯಶಸ್ನ ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 473/9 ಡಿಕ್ಲೇರ್ ಮಾಡಿಕೊಂಡಿತ್ತು.
ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಬಿಸಿದ್ದ ಇಂಗ್ಲೆಂಡ್ 236ಕ್ಕೆ ಆಲೌಟ್ ಆಗಿತ್ತು.
ಈ ಮೂಲಕ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 237 ರನ್ ಗಳ ಮುನ್ನಡೆ ಸಾಧಿಸಿದೆ.
ಆಸೀಸ್ ನ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ಸ್ಟೀವ್ ಸ್ಮಿತ್ 93 ರನ್ ಗಳಿಸಿದ್ದರು.
Steve Smith’s wife catches him shadow batting at 1am in their hotel room.
📸 Instagram/dani_willis #Ashes pic.twitter.com/5COJlUWiJt
— Nic Savage (@nic_savage1) December 18, 2021
ಪಂದ್ಯದ ಮೇಲೆ ಬಿಗಿ ಹಿಡಿದ ಸಾಧಿಸಿರುವುದರಿಂದ ತಂಡದ ಆಟಗಾರರು ನಿದ್ದೆಗೆ ಜಾರಿದ್ರೆ, ಸ್ಟಾಡಿಂಗ್ ನಾಯಕ ಸ್ಮಿತ್ ಮಾತ್ರ ನಿದ್ದೆ ಮಾಡಿಲ್ಲ.
ಅರ್ಧ ರಾತ್ರಿಯಾದರೂ ನಿದ್ರಿಸದ ಸ್ಮಿತ್, ಶ್ಯಾಡೋ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
ಈ ವಿಡಿಯೋವನ್ನು ಅವರ ಪತ್ನಿ ಡ್ಯಾನಿ ವಿಲ್ಲಿಸ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋಗೆ ನೆಟಿಜನ್ಗಳು ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.