ಹುಡುಗಿಯರು ಕ್ರಿಕೆಟ್ ಆಡುವ ಅವಶ್ಯಕತೆ ಇಲ್ಲ : ಗಂಗೂಲಿ ವೈರಲ್ ವಿಡಿಯೋ sourav-gangulys sportskarnataka
ಹುಡುಗಿಯರು ಕ್ರಿಕೆಟ್ ಆಡುವ ಅವಶ್ಯಕತೆ ಇಲ್ಲ. ಅವರು ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೂರು ವರ್ಷಗಳಿಂದ ನೀಡಿದ್ದ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗಂಗೂಲಿ ವಿರುದ್ಧ ಭಾರಿ ಟ್ರೋಲ್ ಗಳು ನಡೆಯುತ್ತಿದೆ.
ಅಂದಹಾಗೆ ವಿರಾಟ್ ಕೊಹ್ಲಿ ಅವರನ್ನ ಏಕದಿನ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಲು ದಾದಾನೇ ಮುಖ್ಯ ಕಾರಣ ಎಂದು ವಿರಾಟ್ ಅಭಿಮಾನಿಗಳು ಭಾವಿಸುತ್ತಿದ್ದಾರೆ.
ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ದಾದಾ ವಿರುದ್ಧ ವಿರಾಟಿಯನ್ಸ್ ಸಿಕ್ಕಸಿಕ್ಕಲ್ಲಿ ತಮ್ಮ ಸಿಟ್ಟನ್ನ ಹೊರಹಾಕುತ್ತಿದ್ದಾರೆ.
ವಿರಾಟ್ ರಿಂದ ನಾಯಕತ್ವ ಕಿತ್ತುಕೊಂಡಿರುವುದರಿಂದ ರೊಚ್ಚಿಗೆದ್ದಿರುವ ಕೊಹ್ಲಿ ಅಭಿಮಾನಿಗಳು, ಗಂಗೂಲಿ ಈ ಹಿಂದೆ ಮಾಡಿದ್ದ ಚಿಕ್ಕ ಚಿಕ್ಕ ತಪ್ಪುಗಳನ್ನ ಹೆಕ್ಕಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.
ಅದರ ಭಾಗವಾಗಿಯೇ ದಾದಾ ಈ ಹಿಂದೆ ಮಹಿಳಾ ಕ್ರಿಕೆಟ್ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರಾಟ್ ಅಭಿಮಾನಿಗಳಿಗೆ ಆಹಾರವಾಗಿದೆ.
ಆ ವಿಡಿಯೋವನ್ನು ಇಟ್ಟುಕೊಂಡು ಕೊಹ್ಲಿ ಅಭಿಮಾನಿಗಳು ದಾದಾರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಅಲ್ಲದೇ ಗಂಗೂಲಿ ಬಗ್ಗೆ ನೆಗಟಿವ್ ಪ್ರಚಾರ ಮಾಡುತ್ತಿದ್ದಾರೆ.
ಅಸಲಿಗೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋ.. ಬರೋಬ್ಬರಿ ಮೂರು ವರ್ಷದ ಹಿಂದಿನದ್ದು. ಒಂದು ಬೆಂಗಾಲಿ ಚಾನಲ್ ನಲ್ಲಿ ದಾದಾ ಮಾತನಾಡುತ್ತಾ.. ಹುಡುಗಿಯರು ಕ್ರಿಕೆಟ್ ಆಡುವ ಅವಕಾಶವಿಲ್ಲ ಎಂದು ವಿವಾದಕ್ಕೆ ನಾಂದಿಯಾಡಿದ್ದರು. ನಾನು ನನ್ನ ಮಗಳಿಗೆ ಕ್ರಿಕೆಟ್ ಆಡು ಎಂದು ಹೇಳುವುದಿಲ್ಲ. ಯಾಕಂದರೇ ಹುಡುಗಿಯರು ಕ್ರಿಕೆಟ್ ಆಡುವ ಅವಶ್ಯಕತೆ ಇಲ್ಲ. ಅವರು ಕ್ರಿಕೆಟ್ ಆಡಲು ನಾಲಾಯಕ್ ಎಂದು ಸಂಚಲನ ಹೇಳಿಕೆ ನೀಢಿದ್ದರು.
ದಾದಾರ ಈ ಹೇಳಿಕೆ ಆಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಸಿಸಿಐ ಬಾಸ್ ಗೆ ಮಹಿಳೆಯರೆಂದರೇ ಗೌರವ ಇಲ್ಲವೆಂದು. ಅದಕ್ಕಾಗಿಯೇ ಇಷ್ಟೋಂದು ಕೆಳ ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.