ಸುನಿಲ್ ಚೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ಫುಟ್ಬಾಲ್ ತಂಡ ಸ್ಯಾಫ್ ಚಾಂಪಿಯನ್ಶಿಪ್ನಲ್ಲಿ ಎದುರಾಳಿ ಪಾಕಿಸ್ತಾನ ವಿರುದ್ಧ 4-0 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿತು.
ಸುನಿಲ್ ಚೆಟ್ರಿ ಏಷ್ಯಾದಲ್ಲಿ ಅತಿ ಹೆಚ್ಚು ಗೋಲು ಹೊಡೆದ ಎರಡನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಪಂದ್ಯದ ಆರಂಭದಲ್ಲೆ ಭಾರತ ತಂಡ ಅನುಭವವನ್ನು ಬಳಸಿಕೊಂಡಿತು.
ಸುನಿಲ್ ಚೆಟ್ರಿ ಎಂದಿನಂತೆ ಆಕ್ರಮಣಕಾರಿ ಆಟಕ್ಕಿಳಿದರು.ತವರಿನಲ್ಲಿ ಅಮೋಘ ಆಟ ಪ್ರದರ್ಶಿಸಿದರು. ಪಂದ್ಯ ಆರಂಭದ 10ನೇ ನಿಮಿಷದಲ್ಲಿ ಗೋಲು ಹೊಡೆದು ಆಘಾತ ನೀಡಿದರು.
ನಂತರ 6 ನಿಮಿಷ ಬಳಿಕ ಪೆನಾಲ್ಟಿ ಅವಕಾಶ ಪಡೆದು ಗೋಲಾನ್ನಾಗಿ ಪರಿವರ್ತಿಸಿದರು. ಮೊದಲಾರ್ಧದಲ್ಲೆ ಹೆಚ್ಚು ಗೋಲುಗಳನ್ನು ಹೊಡೆಯಲು ಯೋಚಿಸಿತು. ಅವಕಾಶಗಳನ್ನು ಕೈಚೆಲ್ಲಿಕೊಂಡಿದ್ದರಿಂದ ಪಾಕ್ ತಂಡದ ಮೇಲೆ ಒತ್ತಡ ಹಾಕುವುದು ಅಷ್ಟು ಸುಲಭವಿರಲಿಲ್ಲ.
ಎರಡನೆ ಅವಯಲ್ಲಿ ಭಾರತ ದಾಳಿಯನ್ನು ಮುಂದುವರೆಸಿತು. 74ನೇ ನಿಮಿಷದಲ್ಲಿ ಮೂರನೆ ಗೋಲು ಹೊಡೆಯಿತು. ಪೆನಾಲ್ಟಿ ಅವಕಶಶ ಪಡೆದ ಭಾರತ ಸುನಿಲ್ ಚೆಟ್ರಿ ಅವರ ನೆರವಿನಿಂದ ಗೋಲು ದಾಖಲಿಸಿತು. ಸುನಿಲ್ ಚೆಟ್ರಿಕ್ ಹ್ಯಾಟ್ರಿಕ್ ಗೋಲು ಹೊಡೆದ ಸಾಧನೆ ಮಾಡಿದರು.
81ನೇ ನಿಮಿಷದಲ್ಲಿ ಸಂದೇಶ್ ಜಹಿನ್ಗಾನ್ ನೀಡಿದ ಪಾಸ್ ಅನ್ನು ಉದಂತಾ ಸಿಂಗ್ ಗೋಲು ಹೊಡೆದರು. ಭಾರತ ಶನಿವಾರ ನೇಪಾಳ ತಂಡವನ್ನು ಎದುರಿಸಲಿದೆ.